ಅಡುಗೆ ಸಿಲೆಂಡರ್‌ ಸ್ಫೋಟ : ತಪ್ಪಿದ ಭಾರಿ ಅನಾಹುತ : ಕಂಬಿಬಾಣೆಯ ಬೂದನ ಪೈಸಾರಿಯಲ್ಲಿ ಘಟನೆ

December 30, 2020

ಮಡಿಕೇರಿ ಡಿ. 30 : ಅಡುಗೆ ಗ್ಯಾಸ್ ಸಿಲೀಂಡರ್ ಸ್ಪೋಟವಾಗಿ ಸ್ಪೋಟದ ತೀವ್ರತೆಗೆ ಮನೆ ಸಂಪೂರ್ಣವಾಗಿ ಹಾನಿಯಾಗಿರುವ ಘಟನೆ ಕಂಬಿಬಾಣೆಯ ಬೂದನ ಪೈಸಾರಿಯಲ್ಲಿ ನಡೆದಿದೆ.

ಕೂಲಿ ಕಾರ್ಮಿಕರಾದ ಸರೋಜ ಮತ್ತು ಮಗ ಮಣಿ ಇಬ್ಬರು ಕೆಲಸಕ್ಕೆಂದು ತೆರಳಿದ ಸಂದರ್ಭ ಆಕಸ್ಮಿಕವಾಗಿ ಅಡುಗೆ ಸಿಲಿಂಡರ್ ಸ್ಫೋಟಗೊಂಡಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಮನೆಯಲ್ಲಿನ ಗೃಹಪಯೋಗಿ ವಸ್ತುಗಳು ಸಂಪೂರ್ಣ ಭಸ್ಮವಾಗಿ ಬೆಂಕಿಗಾಹುತಿಯಾಗಿವೆ.

error: Content is protected !!