ಜೈಲಿನಿಂದ ನಾಮಪತ್ರ ಸಲ್ಲಿಸಿದ್ದ ಪುಲಿಯಂಡ ಬೋಪಣ್ಣಗೆ ಗೆಲುವು

December 30, 2020

ಮಡಿಕೇರಿ ಡಿ.30 : ಸುಮಾರು 12 ವರ್ಷಗಳ ಕಾಲ ಗ್ರಾ.ಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾ.ಪಂ ಗೆ ರಾಷ್ಟ್ರೀಯ ಪುರಸ್ಕಾರ ತಂದು ಕೊಟ್ಟಿದ್ದ ಪುಲಿಯಂಡ ಬೋಪಣ್ಣ ಅವರು ಎಮ್ಮೆಗುಂಡಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
ಜಾತಿ ನಿಂದನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಯಾಗಿದ್ದ ಅವರು ಜೈಲಿನಿಂದಲೇ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದರು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಬೋಪಣ್ಣ ಅವರು 61 ಮತಗಳಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯುಸೂಫ್ ಅವರನ್ನು ಸೋಲಿಸಿದ್ದಾರೆ.
ಕೊನೆಯ ಕ್ಷಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಅವರು ಉಳಿದಿದ್ದ ಎರಡು ದಿನಗಳ ಕಾಲ ಬಿರುಸಿನ ಪ್ರಚಾರ ನಡೆಸಿ ಪಾಲಿಬೆಟ್ಟ ಗ್ರಾ.ಪಂ ಗೆ ಮರು ಆಯ್ಕೆಯಾಗಿದ್ದಾರೆ.

error: Content is protected !!