ಬ್ರಿಟನ್ ನಿಂದ ಬಂದವರ ಮೇಲೆ ನಿಗಾ : ಕೊಡಗು ಜಿಲ್ಲಾಡಳಿತದಿಂದ ಅಗತ್ಯ ಮುಂಜಾಗೃತಾ ಕ್ರಮ

December 30, 2020

ಮಡಿಕೇರಿ ಡಿ.30 : ಬ್ರಿಟನ್ ರೂಪಾಂತರ ವೈರಸ್ ಸೋಂಕಿನ ಆತಂಕ ಇಡೀ ರಾಷ್ಟ್ರದಲ್ಲಿ ಹರಡಿರುವ ಬೆನ್ನಲ್ಲೆ ಕೊಡಗು ಜಿಲ್ಲೆಗೆ ಬ್ರಿಟನ್‍ನಿಂದ 20 ಮಂದಿ ಹಿಂದಿರುಗಿರುವುದನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಖಚಿತ ಪಡಿಸಿದ್ದಾರೆ. ರೂಪಾಂತರ ವೈರಸ್ ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಸ್ವೀಕೃತವಾದ ಪಟ್ಟಿಯ ಪ್ರಕಾರ ಕೊಡಗು ಜಿಲ್ಲೆಗೆ 20 ಮಂದಿ ಬ್ರಿಟನ್‍ನಿಂದ ಹಿಂದಿರುಗಿದ್ದು, ಇವರಲ್ಲಿ 15 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 12 ಜನರ ಪರೀಕ್ಷಾ ವರದಿಯು ನೆಗೆಟಿವ್ ಬಂದಿದ್ದು, 3 ಮಂದಿಯ ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗಿದೆ.
ಉಳಿದ 5 ಜನರ ಪೈಕಿ 4 ಮಂದಿ ಬೇರೆ ಬೇರೆ ಜಿಲ್ಲೆಗಳಲ್ಲಿದ್ದು, ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲೆಯ ಸರ್ವೇಕ್ಷಣಾಧಿಕಾರಿಯವರಿಗೆ ನೀಡಲಾಗಿದೆ. 1 ಪ್ರಕರಣ ಇನ್ನೂ ಪತ್ತೆ ಹಚ್ಚುವ ಹಂತದಲ್ಲಿದ್ದು, ಮಾಹಿತಿಯನ್ನು ಪೆÇಲೀಸ್ ಇಲಾಖೆಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ ಬ್ರಿಟನ್‍ನ ರೂಪಾಂತರ ವೈರಸ್ ದೃಢಪಟ್ಟಿರುವುದಿಲ್ಲ. ಒಂದು ವೇಳೆ ದೃಢಪಟ್ಟರೂ ಪ್ರತ್ಯೇಕ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಮಾಡಿಕೊಳ್ಳಲಾಗಿದೆ. ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವೆಂದು ಅವರು ಅಭಯ ನೀಡಿದ್ದಾರೆ.

error: Content is protected !!