ಡಾ.ವಿಷ್ಣುವರ್ಧನ್ ರ 11ನೇ ಪುಣ್ಯಸ್ಮರಣೆ : ಕೊಡಗು ವಿಷ್ಣುಸೇನಾ ಸಮಿತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

December 30, 2020

ಮಡಿಕೇರಿ ಡಿ.30 : ಸ್ಯಾಂಡಲ್‍ವುಡ್‍ನ ಖ್ಯಾತ ನಟ ಡಾ.ವಿಷ್ಣುವರ್ಧನ್ ಅವರ 11ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕೊಡಗು ಜಿಲ್ಲಾ ವಿಷ್ಣು ಸೇನಾ ಸಮಿತಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿತು.
ಸಮಿತಿಯ ಜಿಲ್ಲಾಧ್ಯಕ್ಷ ರಫೀಕ್ ಅವರ ನೇತೃತ್ವದಲ್ಲಿ ಸದಸ್ಯರು ನಗರದ ಅಶ್ವಿನಿ ಅಸ್ಪತ್ರೆಯಲ್ಲಿರುವ ವಿವಿಧ ವಾರ್ಡ್‍ಗಳಿಗೆ ತೆರಳಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಆಸ್ಪತ್ರೆಯ ಸೂಪರಿಡೆಂಟ್ ರವೀಂದ್ರ, ಶುಶ್ರೂಕಿಯರಾದ ಮಾಲಿನಿ, ಸುಬ್ಬಮ್ಮ ಸಮಿತಿಯ ಪದಾಧಿಕಾರಿಗಳಾದ ಪದ್ಮನಾಭ, ಪ್ರಕಾಶ್, ನೋಬಿನ್, ಸಂತೋಷ್ ನಾಗರಾಜ್, ರಾಜು, ರಹೀಂ, ನಾಗರಾಜ್, ಗಫೂರ್, ಸುಹೇಲ್ ಮತ್ತಿತರರು ಹಾಜರಿದ್ದರು.
ಕುಶಾಲನಗರದ ಶಿರಂಗಾಲದಲ್ಲಿ ನಡೆದ ಡಾ.ವಿಷ್ಣುವರ್ಧನ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ನಡೆಯಿತು. ಸಮಿತಿಯ ಅಧ್ಯಕ್ಷ ರಫೀಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

error: Content is protected !!