ಸುಂಟಿಕೊಪ್ಪದಲ್ಲಿ ಸರಣಿ ಅಪಘಾತ: ಪ್ರಯಾಣಿಕರು ಪಾರು

December 30, 2020

ಮಡಿಕೇರಿ ಡಿ.30 : ಚಾಲಕನ ನಿಯಂತ್ರಣ ತಪ್ಪಿ ಮೂರು ಕಾರು ಒಂದು ಪಿಕಪ್ ವಾಹನ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಸುಂಟಿಕೊಪ್ಪದಲ್ಲಿ ವರದಿಯಾಗಿದೆ.
ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಪಿಕಪ್ ಕೆಎ 19ಎಡಿ 1650 ವಾಹನ ಹಾಗೂ ಕೆಎ19 ಎಡಿ 2093ರ 407 ವಾಹನ ಮೀನು ವಿತರಿಸಿ ಮಂಗಳೂರು ಕಡೆಗೆ ತೆರಳುತ್ತಿದ್ದಾಗ ವಾಹನಗಳು ಹಿಂದಿಕುವ ವೇಗದಲ್ಲಿ ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿ ಬಳಿ ಕೆ.ಪಿ.ಜಗನ್ನಾಥ್ ಅವರು ತಮ್ಮ ಮಾರುತಿ ಅಲ್ಟೊ 800 ಕೆಎ12-ಜೆಡ್ 2535 ಕಾರಿಗೆ ಹಿಂಬಂದಿಯಿಂದ ಬಂದು ಪಿಕಪ್ ಡಿಕ್ಕಿಯಾಗಿದೆ.
ಇದರಿಂದ ಕಾರು ನುಜ್ಜುಗುಜ್ಜಾಗಿದ್ದು, ಕಾವೇರಿ ಹಾಗೂ ಯಶೋಧ ಎಂಬವರ ಮನೆಯ ತಡೆಗೋಡೆಗೆ ಡಿಕ್ಕಿಯಾಗಿ ತಡೆಗೋಡೆ ಮುರಿದು ಬಿದ್ದಿದೆ, ವಾಹನದ ವೇಗವು ಕುಂಠಿತಗೊಳ್ಳದೆ ಅನತಿ ದೂರದಲ್ಲಿ ನೇರವಾಗಿ ನಿಂತಿದ್ದ ಮಾರುತಿ ಅಲ್ಟೊ ಕೆಎ04ಎಂಎಫ್2791 ಡಿಕ್ಕಿಗೊಂಡ ಪರಿಣಾಮ ಮಾರುತಿ ಕಾರು ಹೆದ್ದಾರಿ ಬದಿಯಿಂದ ಬಲಭಾಗದಲ್ಲಿ ನಿಂತಿದ್ದ ಕೆಎಲ್ 58 ಎಡಿ 1047 ಇಕೊ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ನಾಲ್ಕು ವಾಹನಗಳೂ ಜಖಂಗೊಂಡಿದೆ. ಅದೃಷ್ಟವಶತ್ ಯಾವುದೇ ಪ್ರಾಣ ಹಾನಿ ಸಂಭವಿಸಲ್ಲ.
ಈ ಅಪಘಾತದಿಂದ ವಾಹನ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕಾರುಗಳು ತೀವ್ರ ಜಖಂಗೊಂಡಿದ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಪುನಿತ್ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

error: Content is protected !!