ಮತ ಎಣಿಕೆ : ಕೊಡಗಿನ 443 ಕ್ಷೇತ್ರಗಳಿಗೆ 1202 ಸದಸ್ಯರ ಆಯ್ಕೆ

December 30, 2020

ಮಡಿಕೇರಿ ಡಿ.30 : ಕೊಡಗು ಜಿಲ್ಲಾ ವ್ಯಾಪ್ತಿಯ 101 ಗ್ರಾಮ ಪಂಚಾಯ್ತಿಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆಯಿತು.
ಜಿಲ್ಲೆಯ ಒಟ್ಟು 443 ಚುನಾವಣಾ ಕ್ಷೇತ್ರಗಳ 1202 ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಮಡಿಕೇರಿ ತಾಲ್ಲೂಕಿಗೆ ಸಂಬಂಧಿಸಿದಂತೆ ನಗರದ ಸಂತ ಜೋಸೆಫರ ಶಾಲೆಯಲ್ಲಿ, ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ವಿರಾಜಪೇಟೆ ತಾಲ್ಲೂಕಿಗೆ ಸಂಬಂಧಿಸಿದಂತೆ ವಿರಾಜಪೇಟೆ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಬೆಳಗ್ಗಿನಿಂದಲೆ ಮತ ಎಣಿಕಾ ಕೇಂದ್ರಗಳತ್ತ ಆಯಾ ತಾಲ್ಲೂಕಿನ ಗ್ರಾಮ ಪಂಚಾಯ್ತಿ ಅಭ್ಯರ್ಥಿಗಳು, ಅವರ ಬೆಂಬಲಿಗರು ಮತ್ತು ಚುನಾವಣಾ ಆಸಕ್ತರು ಬಂದು ಸೇರುವ ಮೂಲಕ ಜನಜಂಗುಳಿ ನಿರ್ಮಾಣವಾಗಿತ್ತು. ಪಂಚಾಯ್ತಿಗಳ ಫಲಿತಾಂಶ ಬರುತ್ತಿದ್ದಂತೆ ಗೆಲುವಿನ ಅಭ್ಯರ್ಥಿಯನ್ನು ಸ್ವಾಗತಿಸುವ, ಹಾರ ತುರಾಯಿಗಳನ್ನು ಹಾಕಿ ಸಂಭ್ರಮಿಸುವ ಕಾರ್ಯ ನಡೆಯಿತಾದರು, ವಿಜಯೋತ್ಸವಕ್ಕೆ ಅವಕಾಶವಿಲ್ಲದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

error: Content is protected !!