ಟಿ20 ಲೆದರ್ ಬಾಲ್ ಕ್ರಿಕೆಟ್ : ಟೀಂ ಮೇಕ್ಸ್ ವೆಲ್ ಮಾದಾಪುರ ಚಾಂಪಿಯನ್ಸ್

31/12/2020

ಮಡಿಕೇರಿ ಡಿ.31 : ನಾಪಂಡ ಮುತ್ತಪ್ಪ ಹಾಗೂ ನಾಪಂಡ ಮುದ್ದಪ್ಪ (ಎಂ&ಎಂ) ಅಭಿಮಾನಿಗಳ ಬಳಗದ ವತಿಯಿಂದ ನಾಪಂಡ ರವಿ ಮಾದಪ್ಪ ಅವರು ಮಡಿಕೇರಿ ನಗರದ ಮೆನ್ಸ್ ಕಾಂಪೌಂಡ್ ನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಟಿ20 ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಮಾದಾಪುರದ ಟೀಂ ಮೆಕ್ಸ್ ವೆಲ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ ಮಾದಾಪುರ ಇಂಡಿಯನ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.
ಸರಣಿಯಲ್ಲಿ ಭಾಗವಹಿಸಿದ್ದ 15 ತಂಡಗಳ ಪೈಕಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಮೇಕ್ಸ್ ವೆಲ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡು ಇಂಡಿಯನ್ಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಪ್ರಮುಖ 8 ವಿಕೆಟ್ ಗಳನ್ನು ಕಳೆದುಕೊಂಡು 135 ರನ್ನುಗಳನ್ನು ಕಲೆ ಹಾಕಿತ್ತು.
136 ರನ್ನುಗಳ ಗುರಿಯನ್ನು ಬೆನ್ನಟ್ಟಿದ ಟೀಂ ಮೇಕ್ಸ್ ವೆಲ್ ತಂಡ 7 ವಿಕೆಟುಗಳನ್ನು ಕಳೆದು ಕೊಂಡು 136 ರನ್ನುಗಳನ್ನು ಕಲೆ ಹಾಕುವ ಮೂಲಕ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿತ್ತು.
ಇದಕ್ಕೂ ಮೊದಲು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯನ್ಸ್ ತಂಡ ಈಗಲ್ಸ್ ತಂಡವನ್ನು ಹಾಗೂ ಟೀಂ ಮೇಕ್ಸ್ ವೆಲ್ ಎಂ.ವೈ.ಸಿ.ಸ್. ಎ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು.
ಪಂದ್ಯಾಟದಲ್ಲಿ ಮೇನ್ ಆಫ್ ದೀ ಸಿರೀಸ್ ಪ್ರಶಸ್ತಿಯನ್ನು ಇಂಡಿಯನ್ಸ್ ತಂಡದ ಹೇಮಂತ್ ಪಡೆದರೆ, ಮ್ಯಾನ್ ಆಫ್ ದೀ ಮೇಚ್ ರೇಣುಕಾ ಪ್ರಸಾದ್, ಬೆಸ್ಟ್ ಬೆಟ್ಸ್ ಮನ್ ಪ್ರಶಸ್ತಿಯನ್ನು ಎಂ ವೈ ಸಿ ಸಿ ತಂಡದ ವಿನೋದ್ ಪಿಂಟು ಪಡೆದರೆ. ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಮಾದಾಪುರದ ಶ್ರೀ ರಂಜನ್ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಕೋಟೆರಾ ಸುನೀಲ್ ಸೋಮಣ್ಣ, ಚೆಟ್ಟಿಯರಂಡ ನಿರನ್ ಗಣಪತಿ, ಕಣ್ಣಚಂಡ ವಿನೋದ್ ಮೊನ್ನಪ್ಪ, ಭೀಮಯ್ಯ, ಸೂರಜ್, ತಿಮ್ಮಯ್ಯ, ರೋಹಿತ್ ಸೇರಿದಂತೆ ಎಂ&ಎಂ ಅಭಿಮಾನಿ ಬಳಗದ ಪ್ರಮುಖರು ಉಪಸ್ಥಿತರಿದ್ದರು.