ಎನ್‍ಕೌಂಟರ್ ಗೆ ಮೂವರು ಉಗ್ರರು ಬಲಿ

31/12/2020

ಶ್ರೀನಗರ ಡಿ.31 : ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಲಾವಾಯ್ಪೊರಾ ಪ್ರದೇಶದಲ್ಲಿ ಭದ್ರತಾಪಡೆಗಳು ಎನ್‍ಕೌಂಟರ್ ನಡೆಸಿದ್ದು, ಮೂವರು ಉಗ್ರರÀನ್ನು ಹತ್ಯೆ ಮಾಡಿದೆ.
ಲಾವಾಯ್ಪೊರಾದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಕಳೆದ ರಾತ್ರಿಯಿಂದಲೇ ಜಮ್ಮು ಮತ್ತು ಕಾಶ್ಮೀರ ಪೆÇಲೀಸರು ಹಾಗೂ ಭದ್ರತಾಪಡೆಗಳು ಜಂಟಿಯಾಗಿ ಕಾರ್ಯಾಚರಣೆಗಿಳಿದಿದ್ದವು. ಈ ವೇಳೆ ಅಡಗಿ ಕುಳಿತಿದ್ದ ಉಗ್ರ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಕೂಡಲೇ ಸ್ಥಳವನ್ನು ಸುತ್ತುವರೆದ ಭದ್ರತಾಗಳು ಎನ್ಕೌಂಟರ್ ನಡೆಸಿ ಉಗ್ರನೋರ್ವನನ್ನು ಹತ್ಯೆ ಮಾಡಿದ್ದಾರೆ.
ಹತ್ಯೆಯಾದ ಉಗ್ರರು ಯಾವ ಭಯೋತ್ಪಾದಕ ಸಂಘಟನೆಗೆ ಸೇರಿದವರಾಗಿದ್ದಾರೆಂಬುದು ಇನ್ನೂ ತಿಳಿದುಬಂದಿಲ್ಲ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ಜಮ್ಮು ಮತ್ತು ಕಾಶಮೀರ ಬಾಲಕೋಟ್’ನ ಡಬ್ಬಿ ಗ್ರಾಮದಲ್ಲಿ ಉಗ್ರರ ಅಡಗು ತಾಣವೊಂದು ಪತ್ತೆಯಾಗಿದ್ದು, ಈ ಅಡಗುತಾಣದಲ್ಲಿ ಭದ್ರತಾ ಪಡೆಗಳು 2 ಪಿಸ್ತೂಲು, 70 ಪಿಸ್ತೂಲುಗಳ ಗುಂಡುಗಳು, 2 ಗ್ರೆನೇಡ್ ಗಳನ್ನು ವಶಕ್ಕೆ ಪಡೆದಿದ್ದಾರೆ.