ಶ್ವಾಸಕೋಶದಲ್ಲಿ ಕೋವಿಡ್ ಅಂಶ !

December 31, 2020

ಬೆಂಗಳೂರು ಡಿ.31 : ರಾಜ್ಯದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು, ಅದರಿಂದ ಉಂಟಾಗುತ್ತಿರುವ ಸಾವುಗಳು ಕಡಿಮೆಯಾಗುತ್ತಿರಬಹುದು, ಆದರೆ ನಗರದ ಹಲವು ಆಸ್ಪತ್ರೆಗಳಲ್ಲಿ ವೈದ್ಯರು ತಮ್ಮ ಬಳಿ ಬರುವ ರೋಗಿಗಳಲ್ಲಿ ಶ್ವಾಸಕೋಶ, ಎದೆ ಭಾಗಗಳಲ್ಲಿ ಕೋವಿಡ್-19 ಮಾದರಿಯ ಅಂಶಗಳನ್ನು ಪತ್ತೆ ಮಾಡಿದ್ದು, ಸೋಂಕಿನ 2 ನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಗಾಬರಿಯಾಗುವುದು ಅಗತ್ಯವಿಲ್ಲ ಎಂದು ಹೇಳುವ ವೈದ್ಯರು, ಮಾಸ್ಕ್ ಧರಿಸಿ, ನಿಯಮಿತವಾಗಿ ಕೈ ತೊಳೆಯುತ್ತಿರಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡರೆ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಖ್ಯಾತ ಕಾರ್ಡಿಯೋಥೊರಾಸಿಕ್ ಮತ್ತು ನಾಳೀಯ ಶಸ್ತ್ರಚಿಕಿತ್ಸಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆ ಮಾಡಿದ್ದು, ಬೆಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ಒಪಿಡಿ ಹಾಗೂ ವಾಕ್ ಇನ್ ಗಳಲ್ಲಿ ಬರುವ ರೋಗಿಗಳಲ್ಲಿ ತೀವ್ರ ಉಸಿರಾಟದ ಕಾಯಿಲೆ ಕಂಡುಬಂದಿದ್ದು, ಕೋವಿಡ್-19 ಮಾದರಿಯ ಅಂಶಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಆರೋಗ್ಯ ಸಲಹೆಗಾರರಿಗೂ ಸರಿಯಾದ ರಕ್ಷಣೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ವಿನಂತಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

error: Content is protected !!