ದೇಶೀಯ ಆಕಾಶ್ ಕ್ಷಿಪಣಿ ರಫ್ತು

December 31, 2020

ನವದೆಹಲಿ ಡಿ.31 : ದೇಶೀಯ ಆಕಾಶ್ ಕ್ಷಿಪಣಿಯನ್ನು ರಫ್ತು ಮಾಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಇದು 5 ಬಿಲಿಯನ್ ರಕ್ಷಣಾ ರಫ್ತು ಗುರಿಯನ್ನು ಸಾಧಿಸಲು ಮತ್ತು ವಿದೇಶಗಳೊಂದಿಗೆ ಸ್ನೇಹಪರ ಕಾರ್ಯತಂತ್ರದ ಸಂಬಂಧವನ್ನು ಸುಧಾರಿಸಲು ಉದ್ದೇಶಿಸಿದೆ.
ಆದಾಗ್ಯೂ, ಆಕಾಶ್‍ನ ರಫ್ತು ಆವೃತ್ತಿಯು ಪ್ರಸ್ತುತ ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ನಿಯೋಜಿಸಲಾಗಿರುವ ವ್ಯವಸ್ಥೆಗಳಿಗಿಂತ ಭಿನ್ನವಾಗಿರುತ್ತದೆ.
ಈ ಕುರಿತು ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆತ್ಮ ನಿರ್ಭರ ಭಾರತ್ ಅಡಿಯಲ್ಲಿ, ಭಾರತವು ವಿವಿಧ ರೀತಿಯ ರಕ್ಷಣಾ ವೇದಿಕೆಗಳು ಮತ್ತು ಕ್ಷಿಪಣಿಗಳನ್ನು ತಯಾರಿಸುವ ಸಾಮಥ್ರ್ಯದಲ್ಲಿ ಬೆಳೆಯುತ್ತಿದೆ ಎಂದರು.

error: Content is protected !!