ರಾಮ ಟ್ರಸ್ಟ್‌ನಲ್ಲಿ ಕಳವು ಮಾಡಿದವರ ಬಂಧನ

December 31, 2020

ಅಯೋಧ್ಯೆ ಡಿ.31 : ರಾಮಜನ್ಮಭೂಮಿ ಟ್ರಸ್ಟ್ ನಿಂದ 6 ಲಕ್ಷ ರೂಪಾಯಿ ದೋಚಿದ್ದ ಪ್ರಕರಣದಲ್ಲಿ ಉತ್ತರ ಪ್ರದೇಶ ಪೆÇಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಸೆ.9 ರಂದು ಈ ಪ್ರಕರಣ ಬೆಳಕಿಗೆ ಬಂದಿತ್ತು. ಅಯೋಧ್ಯೆಯ ಎಸ್ ಎಸ್ ಪಿ ದೀಪಕ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ರಾಮಜನ್ಮಭೂಮಿ ಟ್ರಸ್ಟ್ ನಿಂದ 6 ಲಕ್ಷ ರೂಪಾಯಿ ಕಳುವಾಗಿರುವ ಬಗ್ಗೆ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ನೀಡಿದ್ದ ದೂರಿನ ಆಧಾರದಲ್ಲಿ ಸೆ.9 ರಂದು ಪ್ರಕರಣ ದಾಖಲಿಸಲಾಗಿತ್ತು.
“ಎಎಸ್ ಪಿ ನೇತೃತ್ವದ ತಂಡ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದವರ ಪೈಕಿ ನಾಲ್ವರನ್ನು ಬಂಧಿಸಿದ್ದು, ಉಳಿದ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಲಾಗುವುದು” ಎಂದು ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!