ಕೊಡಗಿನಲ್ಲಿ ಎಸ್‍ಡಿಪಿಐ ಬೆಂಬಲಿತ 12 ಅಭ್ಯರ್ಥಿಗಳಿಗೆ ಗೆಲುವು

31/12/2020

ಮಡಿಕೇರಿ ಡಿ. 31 : ಈ ಹಿಂದಿನ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 10ಸ್ಥಾನ ಪಡೆದಿದ್ದ ಎಸ್ ಡಿಪಿಐ ಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಇದೀಗ ಮೂರು ತಾಲ್ಲೂಕಿನಲ್ಲಿ 12 ಸ್ಥಾನ ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ.

ಸುಂಟಿಕೊಪ್ಪ 4, ಐಗೂರು 1,ಮೇಕೇರಿ 2, ಕಲ್ಲುಬಾಣೆ ಆರ್ಜಿ 1 ,ನೆಲ್ಲಿಹುದಿಕೇರಿ 1, ಕೊಂಡಂಗೇರಿ 2, ನಾಪೊಕ್ಲು 1 ಸ್ಥಾನ ಪಡೆಯುವ ಮೂಲಕ ಒಟ್ಟು 12 ಸ್ಥಾನ ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ.
ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ 35 ಅಭ್ಯರ್ಥಿಗಳು ಎಸ್ ಡಿಪಿಐ ಬೆಂಬಲಿತರಾಗಿ ಸ್ಪರ್ಧಾ ಕಣದಲ್ಲಿದ್ದು 12 ಅಭ್ಯರ್ಥಿಗಳು ಗೆಲುವಿನೊಂದಿಗೆ 5 ಮಂದಿ ಅಭ್ಯರ್ಥಿಗಳು ಕೆಲವೇ ಅಂತರದ ಮತಗಳಿಂದ ಸೋಲನುಭವಿಸಿದ್ದಾರೆ.
ಕಳೆದ ಬಾರಿ ಸಿದ್ದಾಪುರದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಪೈಪೋಟಿ ನೀಡಿದ್ದ ಎಸ್ ಡಿಪಿಐ 8ಸ್ಥಾನಗಳಲ್ಲಿ ಸ್ಪರ್ಧಿಸಿ 5ಸ್ಥಾನ ಗಳಿಸಿತ್ತು.
ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಸ್ ಡಿಪಿಐ ಪಕ್ಷದ 2ಅಭ್ಯರ್ಥಿಗಳು ಮಾತ್ರ ಸ್ಪರ್ಧೆಯಲ್ಲಿದ್ದರು.
ಕೆಲವೇ ಅಂತರ ಗಳ ಮತದಿಂದ ಸೋಲು ಕಂಡಿದ್ದಾರೆ.
ಗ್ರಾಮದ ಅಭಿವದ್ಧಿ ಹಾಗೂ ಜನಪರ ಸೇವೆಗೆ ಮತದಾರರು ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚು ಬಹುಮತ ನೀಡಿದ್ದಾರೆ ಎಂದು ಎಸ್ ಡಿಪಿಐ ಪಕ್ಷದ ಜಿಲ್ಲಾ ಅಧ್ಯಕ್ಷ ಮನ್ಸೂರ್ ಪತ್ರಿಕೆ ಗೆ ತಿಳಿಸಿದ್ದಾರೆ.