ಕೆ.ನಿಡುಗಣೆ ಜಾನ್ಸನ್ ಪಿಂಟೋಗೆ ದಾಖಲೆ ಮತ

31/12/2020

ಮಡಿಕೇರಿ ಡಿ.31 : ಕೆ.ನಿಡುಗಣೆ ಗ್ರಾ.ಪಂ ಗೆ ಮರು ಆಯ್ಕೆ ಬಯಸಿದ್ದ ಜನಸ್ನೇಹಿ ರಾಜಕಾರಣಿ ಜಾನ್ಸನ್ ಪಿಂಟೋ ಅವರು ದಾಖಲೆ ಸಂಖ್ಯೆಯ ಮತಗಳೊಂದಿಗೆ ಜಯಭೇರಿ ಬಾರಿಸಿದ್ದಾರೆ.
ಚಲಾವಣೆಯಾದ 890 ಮತಗಳ ಪೈಕಿ 711 ಮತಗಳು ಜಾನ್ಸನ್ ಪಿಂಟೋ ಅವರ ಪಾಲಗಿದೆ. ಇವರ ಬಳಗದ ಪ್ರಮೀಳಾ ಸುರೇಶ್ (538), ಅನಿತಾ ಪ್ರಮೋದ್ (469) ಹಾಗೂ ಪುಷ್ಪಲತಾ ಪ್ರೇಮ್ ಕುಮಾರ್ (493) ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ.