2,443 ಗ್ರಾಮೀಣ ಅಂಚೆ ನೌಕರರ ಹುದ್ದೆಗೆ ಅರ್ಜಿ ಆಹ್ವಾನ

December 31, 2020

ಮಡಿಕೇರಿ ಡಿ.31 : ಭಾರತೀಯ ಅಂಚೆ ಇಲಾಖೆ, ಕರ್ನಾಟಕ ಅಂಚೆ ವೃತ್ತವು ಕರ್ನಾಟಕದಲ್ಲಿರುವ 2,443 ಗ್ರಾಮೀಣ ಅಂಚೆ ನೌಕರರ ಹುದ್ದೆಗಳನ್ನು ತುಂಬಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕನಿಷ್ಟ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಮತ್ತು ವಯೋಮಿತಿ ಕನಿಷ್ಟ 18 ರಿಂದ 40 ವರ್ಷಗಳಾಗಿದ್ದು ಅನುಸೂಚಿತ ಜಾತಿ, ಬುಡಕಟ್ಟು, ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅಭ್ಯರ್ಥಿಗಳು ತಮ್ಮ ಹೆಸರನ್ನು http://appost.in/gdsonlin ಅಂತರ್ಜಾಲದ ಮೂಲಕ ನೋಂದಾಯಿಸಬಹುದು. ಹಿಂದುಳಿದ ಮತ್ತು ಸಾಮಾನ್ಯ ವರ್ಗಗಳ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ರಾಜ್ಯದ ಯಾವುದೇ ಅಂಚೆ ಕಚೇರಿಯಲ್ಲಿ ಅಥವಾ ಆಯ್ದ ಅಂಚೆ ಕಚೇರಿಗಳ ಕೌಂಟರ್‍ನಲ್ಲಿ ಸಲ್ಲಿಸಬಹುದು. ವೆಬ್‍ಸೈಟ್‍ನ ಹೋಮ್ ಪೇಜ್‍ನಲ್ಲಿ ಲಭ್ಯವಿರುವ ಯುಆರ್‍ಎಲ್‍ನ ಮೂಲಕ ಶುಲ್ಕವನ್ನು ಕಟ್ಟಬಹುದಾಗಿದೆ.
ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ, ತೃತೀಯ ಲಿಂಗಿಗಳಿಗೆ ಮತ್ತು ಅನುಸೂಚಿತ ಜಾತಿ, ಬುಡಕಟ್ಟು ಅಭ್ಯರ್ಥಿಗಳು ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಎಲ್ಲಾ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳು http://appost.in/gdsonlin ಲಭ್ಯವಿರುತ್ತದೆ ಹಾಗೂ ಅರ್ಜಿ ಸಲ್ಲಿಸಲು 2021 ರ ಜನವರಿ 20 ಕೊನೆಯ ದಿನವಾಗಿದೆ ಎಂದು ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ಎಚ್.ಜೆ. ಸೋಮಯ್ಯ ಅವರು ತಿಳಿಸಿದ್ದಾರೆ.

error: Content is protected !!