ಕೊಡಗು ಗ್ರಾ.ಪಂ ಕ್ಷೇತ್ರಗಳು : ನಾಮಪತ್ರ ಸಲ್ಲಿಸದೆ 10 ಸ್ಥಾನಗಳು ಖಾಲಿ : 100 ಸ್ಥಾನಗಳಿಗೆ ಅವಿರೋಧ ಆಯ್ಕೆ

December 31, 2020

ಮಡಿಕೇರಿ ಡಿ.31 : ಗ್ರಾ.ಪಂ. ಚುನಾವಣೆ ಸಂಬಂಧ ಜಿಲ್ಲೆಯಲ್ಲಿ 101 ಗ್ರಾ.ಪಂ.ಗಳಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. 1202 ಸ್ಥಾನಗಳಲ್ಲಿ, ನಾಮಪತ್ರ ಸಲ್ಲಿಸದೆ 10 ಸ್ಥಾನಗಳು ಖಾಲಿ ಉಳಿದಿದ್ದು, 100 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಮತದಾನ ನಂತರ 1092 ಸದಸ್ಯರು ಆಯ್ಕೆಯಾಗಿದ್ದಾರೆ. ಒಟ್ಟಾರೆ 1192 ಮಂದಿ ಚುನಾಯಿತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಗ್ರಾ.ಪಂ.ಗಳ ಒಟ್ಟು ಸದಸ್ಯರಲ್ಲಿ 574 ಸಾಮಾನ್ಯ, 618 ಮಹಿಳೆ ಒಟ್ಟು 1192 ಆಗಿದೆ. ಹಾಗೆಯೇ ಅನುಸೂಚಿತ ಜಾತಿಯಲ್ಲಿ ಒಟ್ಟು 171 ಸದಸ್ಯರಿದ್ದು, 51 ಸಾಮಾನ್ಯ, 120 ಮಹಿಳಾ ಸದಸ್ಯರು ಆಯ್ಕೆಯಾಗಿದ್ದಾರೆ. ಹಾಗೆಯೇ ಅನುಸೂಚಿತ ಪಂಗಡದಲ್ಲಿ ಒಟ್ಟು 169 ಸದಸ್ಯರಿದ್ದು, 45 ಸಾಮಾನ್ಯ, 124 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಹಿಂದುಳಿದ ‘ಅ’ ವರ್ಗದ ಒಟ್ಟು 191 ಸದಸ್ಯರಲ್ಲಿ 57 ಸಾಮಾನ್ಯ, 134 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಹಾಗೆಯೇ ಹಿಂದುಳಿದ ‘ಬಿ’ ವರ್ಗದಲ್ಲಿ ಒಟ್ಟು 46 ಸದಸ್ಯರಿದ್ದು, ಸಾಮಾನ್ಯ 37, 9 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಹಾಗೆಯೇ ಸಾಮಾನ್ಯ ವರ್ಗದಡಿ ಒಟ್ಟು 615 ಸದಸ್ಯರು ಆಯ್ಕೆಯಾಗಿದ್ದು, ಸಾಮಾನ್ಯ 384 ಮತ್ತು 231 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ತಾಲೂಕುವಾರು ಗಮನಿಸಿದಾಗ ಮಡಿಕೇರಿ ತಾಲ್ಲೂಕಿನ 26 ಗ್ರಾ.ಪಂ.ಗಳಲ್ಲಿ 295 ಸ್ಥಾನಗಳಿದ್ದು, 4 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದೆ ಉಳಿದಿತ್ತು, 27 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 264 ಮಂದಿ ಮತದಾನ ನಡೆದ ನಂತರ ಆಯ್ಕೆಯಾಗಿದ್ದಾರೆ. ಒಟ್ಟು 291 ಚುನಾಯಿತ ಸದಸ್ಯರಾಗಿದ್ದಾರೆ. 291 ಸದಸ್ಯರ ಸಂಖ್ಯೆಯಲ್ಲಿ 141 ಸಾಮಾನ್ಯ, 150 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಅನುಸೂಚಿತ ಜಾತಿಯಲ್ಲಿ 37 ಸದಸ್ಯರು ಆಯ್ಕೆಯಾಗಿದ್ದು, ಸಾಮಾನ್ಯ, 10, 27 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅನುಸೂಚಿತ ಪಂಗಡದಲ್ಲಿ ಒಟ್ಟು 26 ಮಂದಿ ಸದಸ್ಯರು ಆಯ್ಕೆಯಾಗಿದ್ದು, ಸಾಮಾನ್ಯ 1, 25 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಹಿಂದುಳಿದ ‘ಅ’ ವರ್ಗದಲ್ಲಿ ಒಟ್ಟು 59 ಸದಸ್ಯರಲ್ಲಿ 20 ಸಾಮಾನ್ಯ, 39 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಹಿಂದುಳಿದ ‘ಬಿ’ ವರ್ಗದಡಿ ಒಟ್ಟು 15 ಸದಸ್ಯರು ಆಯ್ಕೆಯಾಗಿದ್ದು, 11 ಸಾಮಾನ್ಯ, 4 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸಾಮಾನ್ಯ ವರ್ಗದಡಿ ಒಟ್ಟು 154 ರಲ್ಲಿ 99 ಸಾಮಾನ್ಯ, 55 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿಗೆ ಸಂಬಂಧಿಸಿದಂತೆ 40 ಗ್ರಾ.ಪಂ.ಗಳಲ್ಲಿ 483 ಸ್ಥಾನಗಳಿದ್ದು, 2 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ. 19 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ 462 ಸದಸ್ಯರು ಮತದಾನ ನಂತರ ಆಯ್ಕೆಯಾಗಿದ್ದು, 481 ಚುನಾಯಿತ ಸದಸ್ಯರಿದ್ದಾರೆ. 481 ಸದಸ್ಯರಲ್ಲಿ 231 ಸಾಮಾನ್ಯ, 250 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಅನುಸೂಚಿತ ಜಾತಿ ಒಟ್ಟು 81 ರಲ್ಲಿ 27 ಸಾಮಾನ್ಯ, 54 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಅನುಸೂಚಿತ ಪಂಗಡದಲ್ಲಿ 48 ಸದಸ್ಯರು ಆಯ್ಕೆಯಾಗಿದ್ದು, 6 ಸಾಮಾನ್ಯ, 42 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಹಿಂದುಳಿದ ‘ಅ’ ವರ್ಗದಡಿ ಒಟ್ಟು 82 ಸದಸ್ಯರು ಆಯ್ಕೆಯಾಗಿದ್ದು, 24 ಸಾಮಾನ್ಯ, 58 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಹಿಂದುಳಿದ ‘ಬಿ’ ವರ್ಗದಡಿ ಒಟ್ಟು 19 ಸದಸ್ಯರು ಆಯ್ಕೆಯಾಗಿದ್ದು, ಸಾಮಾನ್ಯ 15, 4 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸಾಮಾನ್ಯ ವರ್ಗದಡಿ ಒಟ್ಟು 251 ರಲ್ಲಿ 159 ಸಾಮಾನ್ಯ, 92 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ವಿರಾಜಪೇಟೆ ತಾಲ್ಲೂಕಿಗೆ ಸಂಬಂಧಿಸಿದಂತೆ 35 ಗ್ರಾ.ಪಂ.ಗಳಲ್ಲಿ 424 ಸ್ಥಾನಗಳಿದ್ದು, 4 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ. 54 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ 366 ಸದಸ್ಯರು ಮತದಾನ ನಂತರ ಆಯ್ಕೆಯಾಗಿದ್ದು, 420 ಚುನಾಯಿತ ಸದಸ್ಯರಿದ್ದಾರೆ. 420 ಸದಸ್ಯರಲ್ಲಿ 202 ಸಾಮಾನ್ಯ, 218 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಅನುಸೂಚಿತ ಜಾತಿ ಒಟ್ಟು 53 ರಲ್ಲಿ 14 ಸಾಮಾನ್ಯ, 39 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಅನುಸೂಚಿತ ಪಂಗಡದಲ್ಲಿ 95 ಸದಸ್ಯರು ಆಯ್ಕೆಯಾಗಿದ್ದು, 38 ಸಾಮಾನ್ಯ, 57 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಹಿಂದುಳಿದ ‘ಅ’ ವರ್ಗದಡಿ ಒಟ್ಟು 50 ಸದಸ್ಯರು ಆಯ್ಕೆಯಾಗಿದ್ದು, 13 ಸಾಮಾನ್ಯ, 37 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಹಿಂದುಳಿದ ‘ಬಿ’ ವರ್ಗದಡಿ ಒಟ್ಟು 12 ಸದಸ್ಯರು ಆಯ್ಕೆಯಾಗಿದ್ದು, ಸಾಮಾನ್ಯ 11, 1 ಮಹಿಳಾ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ವರ್ಗದಡಿ ಒಟ್ಟು 210 ರಲ್ಲಿ 126 ಸಾಮಾನ್ಯ, 84 ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

error: Content is protected !!