ಕುಶಾಲನಗರ ನೂತನ ತಾಲ್ಲೂಕಿಗೆ ಈ ಗ್ರಾಮಗಳು ಸೇರಲಿವೆ

31/12/2020

ಮಡಿಕೇರಿ ಡಿ.31 : ಕುಶಾಲನಗರ ನೂತನ ತಾಲ್ಲೂಕು ಅಸ್ತಿತ್ವಕ್ಕೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಿದೆ. ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಕುಶಾಲನಗರ ಕಸಬಾ ಹೋಬಳಿಯಲ್ಲಿ ಮುಳ್ಳುಸೋಗೆ, ಕೂಡಿಗೆ, ನಂಜರಾಯಪಟ್ಟಣ, ಅಭ್ಯತ್‍ಮಂಗಲ, ಹೆಬ್ಬಾಲೆ, ಶಿರಂಗಾಲ, ತೊರೆನೂರು ಮತ್ತು ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಗೆ ಹುಲುಗುಲಿ, ಕೆದಕಲ್, ಕೊಡಗರ ಹಳ್ಳಿ, ಕಂಬಿಬಾಣೆ, ಚೇರಳ, ಶ್ರೀಮಂಗಲ ಗ್ರಾಮಗಳು ಸೇರಲಿವೆ.
ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ, ಹಾನಗಲ್ಲು, ಬೇಲೂರು, ಐಗೂರು, ಕಿರಗಂದೂರು ನೇರುಗಳಲೆ, ಗಣಗೂರು, ಮಾದಾಪುರ, ಗರ್ವಾಲೆ, ಹರದೂರು.
ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಶಾಂತಳ್ಳಿ, ಕುಮಾರಳ್ಳಿ, ಕುಂದಳ್ಳಿ, ತೊಳೂರು ಶೆಟ್ಟಳ್ಳಿ, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಬೆಸೂರು, ಹಂಡ್ಲಿ, ದೊಡ್ಡ ಕೊಡ್ಲಿ, ಬೆಂಬಲೂರು, ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಶನಿವಾರಸಂತೆ, ದುಂಡಳ್ಳಿ, ನಿಡ್ತ, ಆಲೂರು, ಗೌಡಳ್ಳಿ ಬರಲಿದೆ ಎಂದು ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ರಾಜರ್ಷಿ ಅವರು ತಿಳಿಸಿದ್ದಾರೆ.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರ ಪ್ರಯತ್ನದಿಂದ ಕುಶಾಲನಗರ ನೂತನ ತಾಲ್ಲೂಕು ಅಸ್ತಿತ್ವಕ್ಕೆ ಬಂದಿದೆ ಎಂದು ಶಾಸಕರ ಆಪ್ತ ಸಹಾಯಕರು ತಿಳಿಸಿದ್ದಾರೆ.