ವಾರಿಯರ್ಸ್‍ಗಳನ್ನು ನೆನಪಿಸಿಕೊಳ್ಳಬೇಕು

January 1, 2021

ರಾಜ್ ಕೋಟ್ ಜ. 1 : 2020 ಕಳೆದು ನಾಳೆ 2021ನೇ ಇಸವಿಗೆ ಕಾಲಿಡುತ್ತಿದ್ದೇವೆ. ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತು ಗತಿಸಿದ ವರ್ಷದಲ್ಲಿ ವೈದ್ಯರು, ಆರೋಗ್ಯ ವಲಯದಲ್ಲಿ ಮುಂಚೂಣಿಯಾಗಿ ಸೇವೆ ಸಲ್ಲಿಸಿದ ಕೊರೋನಾ ವಾರಿಯರ್ಸ್‍ಗಳ ಬಗ್ಗೆ ನೆನೆಯಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ದೇಶಕ್ಕೆ ಕೊರೋನಾ ವೈರಸ್ ಮಹಾಮಾರಿ ಲಗ್ಗೆಯಿಟ್ಟ ನಂತರ ಆರೋಗ್ಯ ವಲಯದಲ್ಲಿ ತಮ್ಮ ಜೀವವನ್ನು ಒತ್ತೆಯಿಟ್ಟು ಸಮಾಜದ ಜನರ ಜೀವ ರಕ್ಷಣೆಗಾಗಿ ದುಡಿದವರಿಗೆ ಈ ಸಮಯದಲ್ಲಿ ಕೃತಜ್ಞತೆಗಳನ್ನು ಹೇಳುತ್ತೇನೆ ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.
2020ನೇ ಇಸವಿಯ ಈ ಕೊನೆ ದಿನ ಭಾರತದ ಕೋಟ್ಯಂತರ ವೈದ್ಯರು, ಆರೋಗ್ಯ ವಲಯ ಕಾರ್ಯಕರ್ತರು, ಶುಚಿತ್ವ ವಲಯದಲ್ಲಿ ಕೆಲಸ ಮಾಡುವವರು, ಕೊರೋನಾ ವಾರಿಯರ್ಸ್ ಗಳನ್ನು ನೆನೆದು ಅವರಿಗೆ ಅಭಿನಂದನೆ ಹೇಳಬೇಕು. ಎಲ್ಲರೂ ಒಗ್ಗಟ್ಟಾದರೆ ಎಂತಹ ಕಠಿಣ ಪರಿಸ್ಥಿತಿಗಳನ್ನು ಕೂಡ ಎದುರಿಸಬಹುದು ಎಂಬುದನ್ನು ಈ ವರ್ಷದ ಸವಾಲು ನಮಗೆ ತೋರಿಸಿಕೊಟ್ಟಿದೆ ಎಂದರು.
ಅವರು ಇಂದು ಗುಜರಾತ್ ನ ರಾಜ್ ಕೋಟ್ ನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ(ಏಮ್ಸ್) ಸಂಸ್ಥೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

error: Content is protected !!