ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪರಿಗೆ ಮುಖ್ಯಮಂತ್ರಿಗಳ ಪದಕ ಘೋಷಣೆ

January 1, 2021

ಮಡಿಕೇರಿ ಜ. 1 : ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೆಮ್ಮಚ್ಚಂಡ ಅನೂಪ್ ಮಾದಪ್ಪ ಅವರಿಗೆ ಉತ್ತಮ ಸೇವೆಗಾಗಿ 2019ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಘೋಷಣೆಯಾಗಿದೆ.
ಈ ಸಾಲಿನಲ್ಲಿ ಪದಕಕ್ಕೆ ಪಾತ್ರರಾಗಿರುವ ಕೊಡಗು ಜಿಲ್ಲೆಯ ಏಕೈಕ ಅಧಿಕಾರಿ ಇವರಾಗಿದ್ದಾರೆ. ದಕ್ಷತೆಯೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಖಡಕ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ಜನ ಮೆಚ್ಚುಗೆಯನ್ನು ಕೂಡ ಅನೂಪ್ ಗಳಿಸಿದ್ದಾರೆ.


error: Content is protected !!