ಮೈಸೂರಿನ ದಕ್ಷಿಣ ವಲಯದ ಐಜಿಪಿಯಾಗಿ ಪ್ರವೀಣ್ ಮಧುಕರ್ ಅಧಿಕಾರ ಸ್ವೀಕಾರ

January 1, 2021

ಮೈಸೂರು,ಜ.1 : ಡಿಐಜಿ ಸ್ಥಾನದಿಂದ ಐಜಿಪಿ ಸ್ಥಾನಕ್ಕೆ ಬಡ್ತಿ ಹೊಂದಿರುವ ಪವಾರ್ ಪ್ರವೀಣ್ ಮಧುಕರ್ ಅವರು ದಕ್ಷಿಣ ವಲಯದ ಐಜಿಪಿಯಾಗಿ ಇಂದು ಅಧಿಕಾರ ಸ್ವೀಕರಿಸಿದರು.

ನಿರ್ಗಮಿತ ಐಜಿಪಿ ವಿಫುಲ್ ಕುಮಾರ್ ಸ್ಥಾನಕ್ಕೆ ಪವಾರ್ ಪ್ರವೀಣ್ ಮಧುಕರ್ ನಿಯೋಜನೆಗೊಂಡಿದ್ದಾರೆ. ಮೈಸೂರಿನ ದಕ್ಷಿಣ ವಲಯ ಐಜಿಪಿ ಕಚೇರಿಯಲ್ಲಿ ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಮಧುಕರ್ ಅವರಿಗೆ ಎಸ್ಪಿ ಸಿ.ಬಿ.ರಿಷ್ಯಂತ್ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು.
ವಿಫುಲ್ ಅವರನ್ನು ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿದೆ.

ವಿಫುಲ್ ಕುಮಾರ್ ಸ್ಥಾನಕ್ಕೆ ಡಿಐಜಿ ಸ್ಥಾನದಿಂದ ಐಜಿಪಿ ಸ್ಥಾನಕ್ಕೆ ಬಡ್ತಿ ಹೊಂದಿರುವ ಪವಾರಿ ಪ್ರವೀಣ್ ಮಧುಕರ್ ಅವರನ್ನು ನಿಯೋಜಿಸಲಾಗಿದೆ.

error: Content is protected !!