ಚೆನ್ನಾ(ದೊಡ್ಡ ಕಡಲೆ) ಬಿರಿಯಾನಿ ಮಾಡುವ ವಿಧಾನ

01/01/2021

ಬೇಕಾಗುವ ಸಾಮಾಗ್ರಿಗಳು : ಬಾಸುಮತಿ ಅಕ್ಕಿ 2 ಕಪ್, ಪುದೀನಾ ಸೊಪ್ಪು 2 ಚಮಚ, ಕೊತ್ತಂಬರಿ ಸೊಪ್ಪು 3 ಚಮಚ, ಹಸಿ ಮೆಣಸಿನಕಾಯಿ 2, ಚಿಟಿಕೆಯಷ್ಟು ಕೇಸರಿ, ಕೆನೆಯಿಲ್ಲದ ಹಾಲು ಅರ್ಧ ಕಪ್, ಎಣ್ಣೆ 1 ಚಮಚ

ಮಸಾಲೆ ತಯಾರಿಸಲು ಬೇಕಾಗುವ ಸಾಮಾಗ್ರಿಗಳು : ದೊಡ್ಡ ಕಡಲೆ 1 ಕಪ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಅರಿಶಿಣ ಪುಡಿ 1 ಚಮಚ, ಖಾರದ ಪುಡಿ ಅರ್ಧ ಚಮಚ, ಕೊತ್ತಂಬರಿ ಪುಡಿ 1 ಚಮಚ, ಮೊಸರು 1 ಕಪ್, ಟೊಮೆಟೊ 3(ಕತ್ತರಿಸಿದ್ದು), ಆಲೂಗಡ್ಡೆ 2(ಬೇಯಿಸಿ ಕತ್ತರಿಸಿದ್ದು), ರುಚಿಗೆ ತಕ್ಕ ಉಪ್ಪು, ಎಣ್ಣೆ 1 ಚಮಚ, ನೀರು 2 ಕಪ್

ಮಾಡುವ ವಿಧಾನ: ಮೊದಲಿಗೆ ಕಡಲೆ ಮಸಾಲೆ ಮಾಡಿ, ದೊಡ್ಡ ಕಡಲೆಯನ್ನು ಕಡಿಮೆಯೆಂದರೆ 6 ಗಂಟೆ ಕಾಲ ನೆನೆ ಹಾಕಬೇಕು.ನಂತರ ಕಡಲೆಗೆ 2 ಕಪ್ ನೀರು ಮತ್ತು ಉಪ್ಪು ಹಾಕಿ 2 ವಿಶಲ್ ಬರುವವರೆಗೆ ಬೇಯಿಸಿ. ಈಗ ಪ್ಯಾನ್ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಫ್ರೈ ಮಾಡಿ. ನಂತರ ಖಾರದ ಪುಡಿ, ಅರಿಶಿಣ ಪುಡಿ, ಕೊತ್ತಂಬರಿ ಪುಡಿ ಹಾಕಿ 1 ನಿಮಿಷ ಫ್ರೈ ಮಾಡಿ. ನಂತರ ಕತ್ತರಿಸಿದ ಟೊಮೆಟೊ ಹಾಕಿ 4-5 ನಿಮಿಷ ಫ್ರೈ ಮಾಡಿ, ನಂತರ ಬೇಯಿಸಿದ ಹಾಲುಗಟ್ಟೆ, ಹಸಿ ಮೆಣಸಿನಕಾಯಿ ಮತ್ತು ಮೊಸರು ಹಾಕಿ 5-6 ನಿಮಿಷ ಬೇಯಿಸಿ, ಈಗ ಬೇಯಿಸಿದ ಕಡಲೆ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಗ್ರೇವಿ ರೆಡಿಯಾದ ಬಳಿಕ ಉರಿಯಿಂದ ಇಳಿಸಿ.

ಬಿರಿಯಾನಿಗೆ ತಯಾರಿ: ಕೇಸರಿಯನ್ನು ಹಾಲಿನಲ್ಲಿ ನೆನೆ ಹಾಕಿ ಇಡಿ. ಅನ್ನ ಮುಕ್ಕಾಲು ಭಾಗ ಬೆಂದಾಗ ಅದರ ನೀರು ಬಸಿಯಿರಿ. ನಂತರ ಆ ಅನ್ನಕ್ಕೆ ಕೊತ್ತಂಬರಿ ಸೊಪ್ಪು, ಪುದೀನಾ ಮತ್ತು ಹಸಿ ಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ. ಈಗ ಬಿರಿಯಾನಿ ಮಾಡುವ ಪಾತ್ರೆಗೆ ಎಣ್ಣೆ ಅಥವಾ ತುಪ್ಪ ಸವರಿ, ನಂತರ ಮುಕ್ಕಾಲು ಭಾಗ ಅನ್ನದಲ್ಲಿ ಸ್ವಲ್ಪ ಅನ್ನ ಹಾಕಿ ನಂತರ ಕಡಲೆ ಗ್ರೇವಿ ಹಾಕಿ, ನಂತರ ಪುನಃ ಅನ್ನ ಹಾಕಿ ದೊಡ್ಡ ಕಡಲೆಯ ಗ್ರೇವಿ ಹಾಕಿ. ಕೊನೆಯ ಪದರವಾಗಿ ಅನ್ನ ಹಾಕಿ ನಂತರ ಕೇಸರಿ ಹಾಕಿ ಹಾಲು ಹಾಕಿ, ಅದರ ಮೇಲೆ ಉಳಿದ ಗ್ರೇವಿ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿದರೆ ಕಡಲೆ ಬಿರಿಯಾನಿ ರೆಡಿ.