ಚೆಟ್ಟಳ್ಳಿ ವಿನಾಯಕ ಮನೋರಂಜನಾ ಸಂಘದ ಮಹಾಸಭೆ : ಸಾಧಕರಿಗೆ ಸನ್ಮಾನ

January 1, 2021

ಮಡಿಕೇರಿ ಜ. 1 : ಚೆಟ್ಟಳ್ಳಿ ವಿನಾಯಕ ಮನೋರಂಜನಾ ಸಂಘದ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ದಂಬೆಕೋಡಿ ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೊಸ ಸದಸ್ಯರ ಸೇರ್ಪಡೆಯ ಬಗ್ಗೆ, ಸಂಘದ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಎಸ್.ಹರೀಶ್ ಕೋವಿಡ್ ಕಾರಣದಿಂದಾಗಿ ಸಂಘದ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಸಲು ಸಾಧ್ಯವಾಗದೇ ಇರುವುದರಿಂದ ಮುಂದಿನದಿನಗಳಲ್ಲಿ ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಮೃತಪಟ್ಟ ಸದಸ್ಯ ಕೋರನ ಮನು ಹಾಗೂ ಮುಳ್ಳಂಡ ಕೆ.ಗಣಪತಿ ಅವರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಹಾಸಭೆಯ ವರದಿ ಹಾಗೂ ಆಡಳಿತ ಮಂಡಳಿ ವರದಿಯನ್ನು ಸಂಘದ ಕಾರ್ಯದರ್ಶಿ ಪುತ್ತರಿರ ಕರುಣ್‍ಕಾಳಯ್ಯ ಓದಿದರು.
ಕರುಣ್‍ಕಾಳಯ್ಯನಿಗೆ ಸನ್ಮಾನ: ಪತ್ರಿಕಾಕ್ಷೇತ್ರದಲ್ಲಿ ರಾಜ್ಯಪ್ರಶಸ್ತಿ ವಿಜೇತ ಪುತ್ತರಿರಕರುಣ್ ಕಾಳಯ್ಯರಿಗೆ ಸಂಘದ ಹಿರಿಯ ಸದಸ್ಯರಾದ ಪುತ್ತರಿರ ಗಣೇಶ್ ಭೀಮಯ್ಯ, ಪುತ್ತರಿರ ಟುಟ್ಟು ಕಾರ್ಯಪ್ಪ, ಬಲ್ಲಾರಂಡ ಕಾರ್ಯಪ್ಪ ಹಾಗೂ ಸಂಘದ ಅಧ್ಯಕ್ಷ ದಂಬೆಕೊಡಿ ಹರೀಶ್ ಶಾಲುಹೊದಿಸಿ ಸನ್ಮಾನಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಮುಳ್ಳಂಡ ಪುಸ್ಯ ರಂಜನ್, ಜಂಟಿ ಖಜಾಂಚಿ ಕೊಂಗೇಟಿರ ಲೋಕೇಶ್ ಅಚ್ಚಪ್ಪ, ಪೇರಿಯನ ಘನ ಶ್ಯಾಂ, ಮುಳ್ಳಂಡ ರತ್ತು ಚಂಗಪ್ಪ, ಬಲ್ಲಾರಂಡ ನಾಣಯ್ಯ ಹಾಜರಿದ್ದರು. ಜಂಟಿಕಾರ್ಯದರ್ಶಿ ಚೋಳಪಂಡ ಎಂ.ವಿಜಯ ವಂದಿಸಿದರು.

error: Content is protected !!