ಕುಶಾಲನಗರ ತಾಲ್ಲೂಕು ಅಸ್ತಿತ್ವಕ್ಕೆ : ಹೋರಾಟ ಸಮಿತಿ ಹರ್ಷ : ಸಧ್ಯದಲ್ಲೇ ಅದ್ಧೂರಿ ಕಾರ್ಯಕ್ರಮ

January 1, 2021

ಮಡಿಕೇರಿ ಜ.1 : ಸೋಮವಾರಪೇಟೆ ತಾಲ್ಲೂಕಿನ ಭಾಗವಾಗಿದ್ದ ‘ಕುಶಾಲನಗರ’ವನ್ನು ಕೇಂದ್ರವಾಗಿಸಿಕೊಂಡ ಕೊಡಗಿನ ಐದನೇ ತಾಲ್ಲೂಕು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ನೂತನ ತಾಲ್ಲೂಕಿಗೆ ತಹಶೀಲ್ದಾರರ ನೇಮಕ ಮತ್ತು ತಾ.ಪಂ ಗೆ ಸಂಬಂಧಿಸಿದಂತೆ ಕ್ಷೇತ್ರಗಳ ಪುನರ್ ವಿಂಗಡಣೆಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಕಾವೇರಿ ತಾಲ್ಲೂಕು ಹೋರಾಟ ಕೇಂದ್ರ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್, ಪ್ರತ್ಯೇಕ ಕುಶಾಲನಗರ ತಾಲ್ಲೂಕಿಗಾಗಿ ದಶಕಗಳಿಂದ ನಿರಂತರ ಹೋರಾಟಗಳನ್ನು ರೂಪಿಸಲು ಸಹಕರಿಸಿದ ಸರ್ವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಹೋರಾಟಕ್ಕಾಗಿ ಸ್ಥಾಪಿಸಿಕೊಂಡಿದ್ದ ‘ಕಾವೇರಿ ತಾಲ್ಲೂಕು ಹೋರಾಟ ಸಮಿತಿ’ ಯನ್ನು ನೂತನ ತಾಲ್ಲೂಕು ರಚನೆಯ ಹಿನ್ನೆಲೆಯಲ್ಲಿ ಕಾವೇರಿ ತಾಲ್ಲೂಕು ಕೇಂದ್ರ ಸಮಿತಿಯನ್ನಾಗಿ ಬದಲಾಯಿಸಿಕೊಳ್ಳಲಾಗಿದೆ. ಈ ಸಮಿತಿಯನ್ನು ತಾಲ್ಲೂಕು ರಚನೆಗೆ ಪೂರಕವಾಗಿ ವಿವಿಧ ಬೇಡಿಕೆಗಳ ಈಡೇರಿಕೆಯವರೆಗೆ ಉಳಿಸಿಕೊಂಡು ಬಳಿಕ ವಿಸರ್ಜಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕುಶಾಲನಗರವನ್ನು ಕೇಂದ್ರ್ರವಾಗಿಸಿಕೊಂಡ ಕಾವೇರಿ ತಾಲ್ಲೂಕು 2019ರಲ್ಲೆ 4ನೇ ತಾಲ್ಲೂಕಾಗಿ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬರಬೇಕಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳ ಹಿನ್ನೆಲೆ ಮೂಡಿದ್ದ ಗೊಂದಲ ಗೊಜಲುಗಳಿಂದ ವಿಳಂಬವಾಗಿಯಾದರು ಇದೀಗ ಅಸ್ತಿತ್ವಕ್ಕೆ ಬಂದಿದೆ. ತಾಲ್ಲೂಕು ರಚನೆಯ ಹಿನ್ನೆಲೆ ಸಹಕರಿಸಿದ ಎಲ್ಲಾ ಧರ್ಮೀಯರಿಗೆ, ಎಲ್ಲಾ ಪಕ್ಷಗಳು, ಸರ್ವ ಸಂಘ ಸಂಸ್ಥೆಗಳಿಗೆ ಅಭಾರಿಯಾಗಿರುವುದಾಗಿ ಶಶಿಧರ್ ತಿಳಿಸಿದರು.
::: ಮಾಜಿ ಸಿಎಂ ಕುಮಾರಸ್ವಾಮಿಗೆ ಕೃತಜ್ಞತೆ :::
ಕುಶಾಲನಗರ ತಾಲ್ಲೂಕು ರಚನೆಗೆ ಪೂರಕವಾದ ಅಂಶಗಳಿಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಚಾಲನೆ ದೊರೆಯಿತು. ಈ ಹಿನ್ನೆಲೆ ಅವರಿಗೆ ಹಾಗೂ ಅಂದಿನ ಸಚಿವ ಸಂಪುಟಕ್ಕೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದ ಅವರು, ಕುಮಾರಸ್ವಾಮಿ ಅವರಿಗೆ ಮತ್ತು ಹೋರಾಟಗಾರರಿಗೆ ಕೃತಜ್ಞತೆ ಸಮರ್ಪಣಾ ಕಾರ್ಯಕ್ರಮವನ್ನು ಸಧ್ಯದಲ್ಲೇ ಆಯೋಜಿಸಲಾಗುವುದೆಂದರು. ಈ ಕಾರ್ಯಕ್ರಮ ದಿನಪೂರ್ತಿ ಅದ್ಧೂರಿಯಾಗಿ ನಡೆಯಲಿದ್ದು, ಸಾಂಸ್ಕøತಿಕ ಮೇಳ ವಿಜೃಂಭಿಸಲಿದೆ ಎಂದು ತಿಳಿಸಿದರು.
ನೂತನ ತಾಲ್ಲೂಕು ರಚನೆಯ ಹಂತದಲ್ಲಿ ಕೇಂದ್ರ ಸಮಿತಿಯೇ ನೂತನ ತಾಲ್ಲೂಕಿಗೆ ಒಳಪಡುವ ಗ್ರಾಮಗಳನ್ನು ಒಳಗೊಂಡಂತೆ ಗಡಿಯನ್ನು ಗುರುತಿಸಿಕೊಟ್ಟಿತ್ತು. ಅದರಲ್ಲಿ ಸೂಚಿಸಿದ್ದ ಹರದೂರು ಪಂಚಾಯ್ತಿಗೆ ಒಳಪಟ್ಟ ‘ಅಂಜನಗೇರಿ ಬೆಟ್ಟಗೇರಿ’ ಗ್ರಾಮ ನೂತನ ತಾಲ್ಲೂಕಿನಲ್ಲಿ ಸೇರಿಲ್ಲ. ಈ ಬಗ್ಗೆ ಅಲ್ಲಿನ ಗ್ರಾಮಸ್ಥರಲ್ಲಿ ಕ್ಷಮೆ ಕೋರುವುದಾಗಿ ತಿಳಿಸಿದ ಅವರು, ಆ ಗ್ರಾಮಸ್ಥರ ಆಕಾಂಕ್ಷೆಯಂತೆ ಗ್ರಾಮವನ್ನು ನೂತನ ತಾಲ್ಲೂಕಿಗೆ ಸೇರ್ಪಡೆಗೊಳಿಸುವ ನಿಟ್ಟಿನ ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು.
::: ತಾ.ಪಂ ರಚನೆಯಾಗಲಿ :::
ನೂತನ ತಾಲ್ಲೂಕಿನ ರಚನೆಯೊಂದಿಗೆ ಇನ್ನು ಮೂರು ತಿಂಗಳ ಒಳಗಾಗಿ ನೂತನ ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳ ಪುನರ್ವಿಂಗಡಣೆÉಯೊಂದಿಗೆ ಚುನಾವಣೆಯನ್ನು ನಡೆಸಬೇಕು, ನೂತನ ತಹಶೀಲ್ದಾರ್‍ರನ್ನು ನೇಮಿಸಿ, ಕಂದಾಯ ಇಲಾಖಾ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸುವ ಮೂಲಕ ಕಂದಾಯ ಕಛೇರಿ ಕಾರ್ಯ ಚಟುಚವಟಿಕೆಗಳ ಆರಂಭಕ್ಕೆ ಶೀಘ್ರ ಚಾಲನೆ ನೀಡಬೇಕೆಂದು ವಿ.ಪಿ.ಶಶಿಧರ್ ಒತ್ತಾಯಿಸಿದರು.
::: ಮಂಗಳವಾರ ಸಭೆ :::
ನೂತನ ತಾಲ್ಲೂಕು ರಚನೆಯ ಹೋರಾಟಕ್ಕೆ ಸಹಕರಿಸಿದ ಸರ್ವರು ಮತ್ತು ವಿವಿಧ ಸ್ಥಾನೀಯ ಸಮಿತಿ ಅಧ್ಯಕ್ಷರುಗಳನ್ನೊಳಗೊಂಡ ಸಭೆಯನ್ನು ಜ.4 ರಂದು ಕುಶಾಲನಗರದ ಕನ್ನಿಕಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ನಡೆಸಲಾಗುವುದು. ತಾಲ್ಲೂಕು ರಚನೆಯೊಂದಿಗೆ ಅವಶ್ಯವಾಗಿ ನಡೆಯಬೇಕಿರುವ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
::: ಸೋಮವಾರಪೇಟೆ ತಾಲ್ಲೂಕಿಗೆ ಸಹಕಾರಿ :::
ನೂತನ ಕುಶಾಲನಗರ ತಾಲ್ಲೂಕು ರಚನೆಯ ಬಗ್ಗೆ ಒಂದಷ್ಟು ಅಸಮಾಧಾನ ಸೋಮವಾರಪೇಟೆ ತಾಲ್ಲೂಕಿನವರಿಗೆ ಇರಬಹುದು. ಆದರೆ, ನೂತನ ತಾಲ್ಲೂಕು ರಚನೆಯೊಂದಿಗೆ ಸೋಮವಾರಪೆÉೀಟೆಯಲ್ಲಿ ಅಗತ್ಯ ಸರ್ಕಾರಿ ಕಛೇರಿಗಳು, ಸೌಲಭ್ಯಗಳು ಒದಗಿ ಬರಲಿದೆ. ಇದು ಆ ತಾಲ್ಲೂಕಿನವರಿಗೆ ಅನುಕೂಲಕರವಾಗಲಿದೆ ಎಂದು ತಿಳಿಸಿದ ಅವರು, ನಾಪೋಕ್ಲುವನ್ನು ಕೇಂದ್ರ್ರವಾಗಿಸಿಕೊಂಡ ಪ್ರತ್ಯೇಕ ತಾಲ್ಲೂಕು ರಚನೆಯಾಗಬೇಕು, ಇದಕ್ಕೆ ಪೂರಕವಾದ ಸಲಹೆ ಮತ್ತು ಸಹಕಾರಕ್ಕೆ ನಾವು ಸಿದ್ಧ ಇರುವುದಾಗಿ ತಿಳಿಸಿದರು.
::: ಗುಂಡೂರಾವ್ ಕನಸು :::
ಕೇಂದ್ರ ಸಮಿತಿಯ ಖಾಯಂ ಆಹ್ವಾನಿತರಾದ ಕೆ.ಪಿ.ಚಂದ್ರಕಲಾ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಶಾಲನಗರದ ದಿ.ಆರ್.ಗುಂಡೂರಾವ್ ಅವರ ಕನಸು ನೂತನ ತಾಲ್ಲೂಕು ರಚನೆಯೊಂದಿಗೆ ನನಸಾಗಿದೆ ಎಂದು ಸ್ಮರಿಸಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರಬಾಬು, ಅತ್ತೂರು ನಲ್ಲೂರು ಸ್ಥಾನೀಯ ಸಮಿತಿ ಅಧ್ಯಕ್ಷ ಡಾ.ಶಶಿಕಾಂತ್ ರೈ, ತೊರೆನೂರು ಸ್ಥಾನೀಯ ಸಮಿತಿ ಅಧ್ಯಕ್ಷ ಕೃಷ್ಣೇಗೌಡ, ಕೇಂದ್ರ್ರ ಸಮಿತಿ ಸದಸ್ಯರಾದ ಸುನೀತ ಹಾಗೂ ನೆಲ್ಲಿಹುದಿಕೇರಿ ಸ್ಥಾನೀಯ ಸಮಿತಿ ಅಧ್ಯಕ್ಷÀ ಪಿ.ಆರ್.ಭರತ್ ಉಪಸ್ಥಿತರಿದ್ದರು.

error: Content is protected !!