ಗ್ರಾ.ಪಂ ನೂತನ ಸದಸ್ಯರಿಗೆ ನಂದಿಮೊಟ್ಟೆ ಜೀಪ್ ಮಾಲೀಕರ ಮತ್ತು ಚಾಲಕರ ಸಂಘದಿಂದ ಸನ್ಮಾನ

January 1, 2021

ಮಡಿಕೇರಿ ಜ.1 : ಹೆಬ್ಬೆಟ್ಟಗೇರಿ ಮತ್ತು ಕಳಕೇರಿ ನಿಡುಗಣೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ನಂದಿಮೊಟ್ಟೆ ಜೀಪ್ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಹೆಬ್ಬೆಟ್ಟಗೇರಿ ಗ್ರಾ.ಪಂ ಕಚೇರಿ ಎದುರು ಸಂಘದ ಅಧ್ಯಕ್ಷ ತೆಕ್ಕಡ ಕಾಶಿ ಅವರ ನೇತೃತ್ವದಲ್ಲಿ ನೂತನವಾಗಿ ಆಯ್ಕೆಯಾದ ಕೊಕ್ಕಲೇರ ಕೆ.ಅಯ್ಯಪ್ಪ, ಪಿ.ಸಿ.ರಾಜು, ಡೀನ್ ಬೋಪಣ್ಣ, ರೀಟಾಮುತ್ತಣ್ಣ ಹಾಗೂ ಸತೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಸದಸ್ಯರುಗಳಾದ ಶರಣು, ನಿತಿನ್, ಸಂಪತ್, ಉಮೇಶ್, ಕೃಷ್ಣಪ್ಪ ಮತ್ತಿತರರು ಈ ಸಂದರ್ಭ ಹಾಜರಿದ್ದರು.

error: Content is protected !!