ಕಾವೇರಿ ಪರಿಸರ ರಕ್ಷಣಾ ಬಳಗದಿಂದ ಕುಶಾಲನಗರದ ಹಿಂದೂ ರುದ್ರಭೂಮಿಗೆ ಸಿಮೆಂಟ್ ಬೆಂಚ್ ಅಳವಡಿಕೆ

January 1, 2021

ಕುಶಾಲನಗರ ರಿ. 1 : ಕುಶಾಲನಗರದ ಹಿಂದೂ ಮತ್ತು ಸಾರ್ವಜನಿಕ ರುದ್ರಭೂಮಿ ಅಭಿವೃದ್ಧಿಗೆ ಕುಶಾಲನಗರ ಪ.ಪಂ ಮೂಲಕ ಅಂದಾಜು 20 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಯೋಜನೆ ರೂಪಿಸಲಾಗಿದೆ ಎಂದು ಪ.ಪಂ ಸದಸ್ಯರಾದ ಅಮೃತ್‍ರಾಜ್ ತಿಳಿಸಿದ್ದಾರೆ.
ಕಾವೇರಿ ಪರಿಸರ ರಕ್ಷಣಾ ಬಳಗದ ವತಿಯಿಂದ ರುದ್ರಭೂಮಿಯಲ್ಲಿ ಅಳವಡಿಸಿದ ಸಿಮೆಂಟ್ ಬೆಂಚ್ ಲೋಕಾರ್ಪಣೆಗೊಳಿಸಿ ಮಾತನಾಡಿ, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು ಪ್ರತಿಯೊಬ್ಬರ ಆದ್ಯ ಜವಾಬ್ದಾರಿಯಾಗಿದೆ ಎಂದರು.
ಪರಿಸರ ಸಂರಕ್ಷಣೆಯೊಂದಿಗೆ ಸ್ವಚ್ಚತೆಗೆ ಹೆಚ್ಚಿನ ಆದÀ್ಯತೆ ಕಲ್ಪಿಸುವ ಮೂಲಕ ಸ್ವಚ್ಚ ನಗರ ರೂಪಿಸಲು ಪ್ರತಿಯೊಬ್ಬರೂ ಪಣತೊಡಬೇಕೆಂದು ಅಮೃತ್‍ರಾಜ್ ಕರೆ ನೀಡಿದರು. ನಿಷ್ಠೆಯೊಂದಿಗೆ ಕಾಯಕ ಮಾಡುವ ಜನರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುವುದು ಉತ್ತಮ ಕಾರ್ಯ ಎಂದರು.
ಈ ಸಂದರ್ಭ ರುದ್ರಭೂಮಿ ಕಾವಲುಗಾರರಾದ ಭಾಗ್ಯಮ್ಮ ಅವರನ್ನು ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬಳಗದ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್ ಮತ್ತು ಬಳಗದ ಸದಸ್ಯರು ಇದ್ದರು.

error: Content is protected !!