ಅರೆಭಾಷೆ ರಂಗಪಯಣ ‘ಸಾಹೇಬ್ರು ಬಂದವೇ’ ನಾಟಕ ಪ್ರದರ್ಶನ ಆರಂಭ

January 1, 2021

ಮಡಿಕೇರಿ ಜ.1 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಕಳೆದ ಫೆಬ್ರ್ರವರಿ-ಮಾರ್ಚ್ ತಿಂಗಳಲ್ಲಿ 40 ದಿನಗಳ ರಂಗ ತರಬೇತಿ ಶಿಬಿರ ಹಮ್ಮಿಕೊಂಡಿತ್ತು. ಈ ಶಿಬಿರದಲ್ಲಿ ಅರೆಭಾಷೆ ನಾಟಕ ‘ಸಾಹೇಬ್ರು ಬಂದವೇ’ ಸಿದ್ದಗೊಂಡು ಯಶಸ್ವೀ ಪ್ರದರ್ಶನ ಕಂಡಿದೆ.
ಇದೀಗ ರಾಜ್ಯದಾದ್ಯಂತ ಅರೆಭಾಷೆಯನ್ನು ಪಸರಿಸುವ ನಿಟ್ಟಿನಲ್ಲಿ ಅಕಾಡೆಮಿ ರಂಗಪಯಣವನ್ನು ಹಮ್ಮಿಕೊಂಡಿದ್ದು, ಜ.1 ರಂದು ಶಿವಮೊಗ್ಗದಲ್ಲಿ ರಂಗಪಯಣ ಉದ್ಘಾಟನೆಗೊಳ್ಳಲಿದೆ.
ಶಿವಮೊಗ್ಗ ರಂಗಾಯಣದಲ್ಲಿ ಜ.1 ರಂದು ಪ್ರದರ್ಶನ ಕಾಣಲಿದ್ದು, 2 ರಂದು ತೀರ್ಥಹಳ್ಳಿಯ ನಟಮಿತ್ರರು ಸಭಾಂಗಣ, 3 ರಂದು ಉಡುಪಿಯ ಆಳ್ವಾಸ್ ನುಡಿಸಿರಿ ಘಟಕ, 4 ರಂದು ಬೈಂದೂರಿನ ಸುರಭಿ ಸಭಾಂಗಣ 6 ಮತ್ತು 7 ರಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ, 8 ರಂದು ಸುಳ್ಯದ ಕನಕಮಜಲು ಯುವಕ ಮಂಡಲ, 9 ರಂದು ಪುತ್ತೂರು ಶಿವರಾಮ ಕಾರಂತ ಬಾಲಭವನ, 10 ರಂದು ಮಡಿಕೇರಿಯ ಸಂತ ಜೋಸೆಫರ ವಿದ್ಯಾಸಂಸ್ಥೆ, 11 ರಂದು ಮಂಗಳೂರು ಪಾದುವ ಕಾಲೇಜು, 13 ರಂದು ಮೈಸೂರು ರಂಗಾಯಣ 17 ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.
ಜ.10 ರಂದು ನಗರದಲ್ಲಿ ‘ಸಾಹೇಬ್ರು ಬಂದವೇ’ ನಾಟಕ ಪ್ರದರ್ಶನ: ರಂಗಪಯಣ ತಿರುಗಾಟದಲ್ಲಿ ಸಾಹೇಬ್ರು ಬಂದವೇ ನಾಟಕವು ನಗರದಲ್ಲಿ ಜನವರಿ 10 ರಂದು ಸಂತ ಜೋಸೆಫರ ವಿದ್ಯಾಸಂಸ್ಥೆಯ ಆವರಣದಲ್ಲಿ ಪ್ರದರ್ಶನಗೊಳ್ಳಲಿದ್ದು, ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ಕೊಂಬಾರನ ಜಿ.ಬೋಪಯ್ಯ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಹೊಸೂರು ರಮೇಶ್ ಜೋಯಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಕೋರನ ವಿಶ್ವನಾಥ, ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು, ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಕಜೆಗದ್ದೆ, ಮುಖ್ಯ ಮಾತುಗಾರರಾಗಿ ಸುಬ್ರಾಯ ಸಂಪಾಜೆ ಇವರು ಉಪಸ್ಥಿತರಿರುವರು. ಸಭಾ ಕಾರ್ಯಕ್ರಮ ನಂತರ ಸಾಹೇಬ್ರು ಬಂದವೇ ನಾಟಕ ಪ್ರದರ್ಶನಗೊಳ್ಳಲಿದೆ.

error: Content is protected !!