ಪಾಲಿಬೆಟ್ಟ ಗ್ರಾ.ಪಂ : ನೂತನ ಸದಸ್ಯರುಗಳಿಗೆ ಪ್ರಮಾಣ ಪತ್ರ ವಿತರಣೆ

January 1, 2021

ಸಿದ್ದಾಪುರ ಜ.1 : ಪಾಲಿಬೆಟ್ಟ ಗ್ರಾ.ಪಂ ಗೆ ನೂತನವಾಗಿ ಆಯ್ಕೆಯಾದ ಸದಸ್ಯರುಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
1ನೇ ವಾರ್ಡಿನಿಂದ ಆಯ್ಕೆಯಾದ ಸಾವಿತ್ರಿ, ಪುಲಿಯಂಡ ಬೋಪಣ್ಣ, 2ನೇ ವಾರ್ಡಿನಿಂದ ಲೀಲಾವತಿ, ರೇಖಾ ಸೋಮಯ್ಯ, ಮಾಳೇಟಿರ ಪವಿತ್ರ, ಮೂರನೇ ವಾರ್ಡ್ ನಿಂದ ಅನಿತಾ ರಾಮ್ ದಾಸ್, ನೇತ್ರಾವೆಂಕಟೇಶ್, ಅಬ್ದುಲ್ ನಾಸರ್ ಅವರಿಗೆ ಚುನಾವಣಾಧಿಕಾರಿ ಶಿವದಾಸ್ ಹಾಗೂ ಮಾದಪ್ಪ ಅವರುಗಳು ಪ್ರಮಾಣಪತ್ರ ವಿತರಿಸಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಕಾರ್ಯದರ್ಶಿ ಗಂಗಮ್ಮ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

error: Content is protected !!