ವಿರಾಜಪೇಟೆಯಲ್ಲಿ ಶ್ರೀಅಯ್ಯಪ್ಪ ಸ್ವಾಮಿ ಪೂಜಾ ಮಹೋತ್ಸವ

January 1, 2021

ವಿರಾಜಪೇಟೆ ಜ.1 : ಭಕ್ತರ ಕೊರತೆಯ ನಡುವೆ ವಿರಾಜಪೇಟೆಯ ಮಲೆತಿರಿಕೆ ಬೆಟ್ಟದ ಶ್ರೀಅಯ್ಯಪ್ಪ ಸ್ವಾಮಿ ದೇವಾಲಯದ ವಾರ್ಷಿಕ ಪೂಜಾ ಮಹೋತ್ಸವ ಸರಳ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.
ಗಣಪತಿ ಹೋಮ, ಲಕ್ಷ್ಮೀ ಪೂಜೆ, ಲಕ್ಷಾರ್ಚನೆ ಮತ್ತು ಶ್ರೀಅಯ್ಯಪ್ಪ ಸ್ವಾಮಿಗೆ ಮಹಾಪೂಜೆ ಸಲ್ಲಿಸಲಾಯಿತು. ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.
ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷÀ ಎಂ.ಕೆ.ಪೂವಯ್ಯ, ಕಾರ್ಯದರ್ಶಿ ಎನ್.ಎಸ್.ಶ್ಯಾಮ್ ಕುಮಾರ್, ಖಜಾಂಚಿ ಎಂ.ಕೆ.ಪ್ರದ್ಯುಮ್ನ ಎ.ಆರ್.ಯೋಗಾನಂದ ರಾವ್, ಚಿತ್ರಭಾನು, ಡಿ.ಎಂ.ರಾಜ್ ಕುಮಾರ್, ದಶರಥ ಆಚಾರ್. ವಿ.ಕೆ.ಚಂದ್ರನ್ ಮತ್ತಿತರರು ಹಾಜರಿದ್ದರು.

error: Content is protected !!