ಗೋವಾದಲ್ಲಿ ರಾಷ್ಟ್ರ ಮಟ್ಟದ ಕಾಲ್ಚೆಂಡು ಪಂದ್ಯಾಟ: ಬ್ಲೂ ಸ್ಟಾರ್ ಕರ್ನಾಟಕ ತಂಡಕ್ಕೆ ದ್ವಿತೀಯ ಸ್ಥಾನ

January 2, 2021

ಮಡಿಕೇರಿ ಜ.1 : ಇಂಡಿಯನ್ ಸ್ಪೋರ್ಟ್ಸ್ ಫೆಡರೇಶನ್ ಗೋವಾದಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾಟದಲ್ಲಿ ಕೊಡಗು ಜಿಲ್ಲೆಯ ಆಟಗಾರರನ್ನೊಳಗೊಂಡ ಬ್ಲೂ ಸ್ಟಾರ್ ಫುಟ್ಬಾಲ್ ಕ್ಲಬ್ ಕರ್ನಾಟಕ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ.
ಬ್ಲೂ ಸ್ಟಾರ್ ಕರ್ನಾಟಕ ತಂಡವು ಸೆಮಿಫೈನಲ್ ಪಂದ್ಯದಲ್ಲಿ ಗೋವಾ ರಾಜ್ಯದ ವಿರುದ್ಧ 6-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.
ಬ್ಲೂ ಸ್ಟಾರ್ ಎಫ್.ಸಿ ಪರವಾಗಿ ಶಾಹಿಬ್ ಕೊಡಗು 03, ಪ್ರೀತಮ್ ಕೊಡಗು 02, ಹಾಗೂ ಸಂಜಿತ್ ಮಂಗಳೂರು ಒಂದು ಗೋಲು ಗಳಿಸಿದರು.
ಬ್ಲೂ ಸ್ಟಾರ್ ಎಫ್.ಸಿ ಕರ್ನಾಟಕ ತಂಡವು ಫೈನಲ್ ಪಂದ್ಯದಲ್ಲಿ ಬಲಿಷ್ಠ ತಂಡವಾದ ಡೆಲ್ಲಿ ವಿರುದ್ಧ 2-1 ಗೋಲುಗಳ ಅಂತರದಿಂದ ಸೋಲು ಅನುಭವಿಸಿತು.
19 ವರ್ಷದೊಳಗಿನ ಆಟಗಾರರಿಗೆ ನಡೆದ ಕಾಲ್ಚೆಂಡು ಪಂದ್ಯದಲ್ಲಿ
ಬ್ಲೂ ಸ್ಟಾರ್ ಎಫ್.ಸಿ ಕರ್ನಾಟಕ ತಂಡದ ಮೂರನೇ ಸ್ಥಾನ ಪಡೆಯಿತು .
ಕೊಡಗು ಜಿಲ್ಲೆಯ ಕುಶಾಲನಗರದ ನಿವಾಸಿಯಾದ ಶಾಹಿಬ್ ಬ್ಲೂ ಸ್ಟಾರ್ ಎಫ್.ಸಿ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬ್ಲೂ ಸ್ಟಾರ್ ಎಫ್.ಸಿ ಜೂನಿಯರ್ ತಂಡದ ಪರವಾಗಿ ಕೊಡಗು ಜಿಲ್ಲೆಯ ಎಂಟು ಆಟಗಾರರು ಹಾಗೂ ಸಿನೀಯರ್ ತಂಡದ ಪರವಾಗಿ ಮೂರು ಆಟಗಾರರು ಪಂದ್ಯಾಟದಲ್ಲಿ ಭಾಗವಹಿಸಿದ್ದರು.

error: Content is protected !!