ಸುಂಟಿಕೊಪ್ಪದಲ್ಲಿ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ

January 2, 2021

ಸುಂಟಿಕೊಪ್ಪ,ಜ.2: ಕೊರೊನಾ ಭೀತಿಯ ನಡುವೆ ಆಟೋಟ ಸ್ಪರ್ಧೆಗಳು ಕುಂಠಿತಗೊಂಡಿದ್ದು ಹೊಸ ವರ್ಷದಲ್ಲಿ ಫುಟ್ಬಾಲ್ 5+2 ಪಂದ್ಯಾಟ ನಡೆಸುತ್ತಿರುವುದು ಕ್ರೀಡಾಭಿಮಾನಿಗಳಿಗೆ ಹರುಷ ತರಿಸಿದೆ ಎಂದು ಹಾಸನ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದ ಅಧ್ಯಕ್ಷರಾದ ಎ.ಲೋಕೇಶ್ ಕುಮಾರ್ ಹೇಳಿದರು.
ಸುಂಟಿಕೊಪ್ಪದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಡಿಗೋ ಮರಡೋನ ಸ್ಮರಣಾರ್ಥವಾಗಿ ಪ್ರೆಂಡ್ಸ್ ಕ್ಲಬ್ ವತಿಯಿಂದ ಫುಟ್ಬಾಲ್ 5+2 ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕೊರೊನಾದಿಂದ ಕಳೆದ ವರ್ಷ ಇಲ್ಲಿನ ಮೈದಾನದಲ್ಲಿ ರಾಜ್ಯಮಟ್ಟದ ಡಿ.ಶಿವಪ್ಪ ಮೆಮೊರಿಯಲ್ ಪುಟ್ಬಾಲ್ ಪಂದ್ಯಾಟವು 2020 ರಲ್ಲಿ 25ನೇ ವರ್ಷಾಚರಣೆಯ ವರ್ಷವಾಗಿದ್ದು ಪಂದ್ಯಾವಳಿಯನ್ನು ಕೊರೊನಾ ಹೆಮ್ಮರಿಯಿಂದ ನಡೆಸಲಾಗಿಲ್ಲ ಇದರಿಂದ ಕ್ರೀಡಾಭಿಮಾನಿಗಳಿಗೆ ನಿರಾಶೆಯಾಗಿದೆ. ಈ ವರ್ಷದ ಮೊದಲ ತಿಂಗಳಿನಲ್ಲಿಯೇ 5+2 ಪುಟ್ಬಾಲ್ ನಡೆಯುತ್ತಿರುವುದು ಫುಟ್ಬಾಲ್ ಗರಿ ಮೂಡಿದೆ ಕೊರೊನಾ ಮಾರಿ ಬೇಗ ಹೋಗಲಿ ಆಟೋಟ ಆರಂಭವಾಗಬೇಕು ಜಾತ್ಯಾತೀತ ನಿಲುವಿಗೆ ಸಂವಿಧಾನ ಆಶಯಗಳಿಗೆ ಕ್ರೀಡೆ ಒತ್ತು ನೀಡುತ್ತದೆ ಎಂದು ಅವರು ಹೇಳಿದರು.
ಸುಂಟಿಕೊಪ್ಪ ಗ್ರಾ.ಪಂ.ಪಿಡಿಓ ವೇಣುಗೋಪಾಲ್ ಅವರು ಮಾತನಾಡಿ ಸುಂಟಿಕೊಪ್ಪ ಪುಟ್ಬಾಲ್ ಆಟಕ್ಕೆ ಹೆಸರುವಾಸಿ ಇಲ್ಲಿನ ಆನೇಕ ಪ್ರತಿಭೆಗಳು ರಾಜ್ಯ ರಾಷ್ಟ್ರಮಟ್ಟದ ಫುಟ್ಬಾಲ್ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ. ಆಟಗಾರರಿಗೆ ಶಿಸ್ತು ಸಂಯಮ ಅಗತ್ಯ ಎಂದು ಪುಟ್ಬಾಲ್ ಆಟಗಾರರಾದ ಅವರು ಹೇಳಿದರು.
ಈ ಸಂದರ್ಭದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಗೀತಾ, ಸಹಶಿಕ್ಷಕಿಯರು,ಗ್ರಾ.ಪಂ. ನೂತನ ಸದಸ್ಯ ಜಿನಾಸುದ್ದೀನ್, ಪಂಚಾಯಿತಿ ಸಿಬ್ಬಂದಿ ಪುನೀತ್, ಪಂದ್ಯಾಟ ಆಯೋಜಕರಾದ ಇಬ್ರಾಹಿಂ,ಅಬ್ಬೂಕರ್, ಮಜಿದ್ ಮತ್ತಿತರರು ಇದ್ದರು.
2ದಿನಗಳ ಕಾಲ ನಡೆಯುವ ಪಂದ್ಯಾವಳಿಗೆ ಒಟ್ಟು 24 ತಂಡಗಳು ನೊಂದಾವಣೆಗೊಂಡಿದೆ ಎಂದು ಪಂದ್ಯಾವಳಿ ಆಯೋಜಕರು ತಿಳಿಸಿದ್ದಾರೆ.

error: Content is protected !!