ಮಡಿಕೇರಿಯಲ್ಲಿ ಬಂಟ್ಸ್ ಪ್ರೀಮಿಯರ್ ಲೀಗ್ ಪಂದ್ಯಾವಳಿ

January 2, 2021

ಮಡಿಕೇರಿ ಜ.1 : ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯುವ ಬಂಟ್ಸ್ ವತಿಯಿಂದ ಐಪಿಎಲ್ ಮಾದರಿಯ “ಬಂಟ್ಸ್ ಪ್ರೀಮಿಯರ್ ಲೀಗ್-ಸೀಸನ್ 1” ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಾವಳಿಗೆ ಕುಶಾಲನಗರ ರೈ ಎಲೆಕ್ಟ್ರಿಕಲ್ಸ್‍ನ ಮಾಲೀಕ ವಸಂತ್.ಪಿ.ರೈ ಚಾಲನೆ ನೀಡಿದರು. ಬಂಟರ ಸಮಾಜದ ಪ್ರಮುಖರಾದ ರವೀಂದ್ರ ರೈ, ಬಿ.ಡಿ.ನಾರಾಯಣ ರೈ, ಬಿ.ಆರ್.ರತ್ನಾಕರ್ ಶೆಟ್ಟಿ, ರಮೇಶ್ ರೈ, ನಾಗೇಂದ್ರ ರೈ, ಸುರೇಶ್ ರೈ ಹಾಗೂ 8 ಕ್ರಿಕೆಟ್ ತಂಡಗಳ ಮಾಲೀಕರು ಹಾಜರಿದ್ದರು.
ಎರಡು ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಬಂಟ್ಸ್ ಜಾಗ್ವಾರ್ಸ್, ಬೊಟ್ಲಪ್ಪ ಬಂಟ್ಸ್ ಚಾಲೆಂಜರ್ಸ್, ನೀಲುಮಾಡು ವಾರಿಯರ್ಸ್, ಬಂಟ್ಸ್ ಆವೆಂಜರ್ಸ್ ಹಾಕತ್ತೂರು, ಮಲೆನಾಡು ಪ್ಯಾಂಥರ್ಸ್, ರೋರಿಂಗ್ ಬಂಟ್ಸ್ ಕುಶಾಲನಗರ, ಸುರಭಿ ಸೂಪರ್ ಕಿಂಗ್ಸ್, ಬಂಟ್ಸ್ ಬ್ರಿಗೇಡ್ ಮಡಿಕೇರಿ ಸೇರಿದಂತೆ ಒಟ್ಟು 8 ತಂಡಗಳು ಪಾಲ್ಗೊಂಡಿದ್ದವು.
ಯುವ ಬಂಟ್ಸ್ ಮತ್ತು ಕೊಡಗು ಪ್ರೆಸ್ ಕ್ಲಬ್ ತಂಡಗಳ ನಡುವೆ ನಡೆದ 4 ಓವರ್‍ಗಳ ಉದ್ಘಾಟನಾ ಪಂದ್ಯದಲ್ಲಿ ಕೊಡಗು ಪ್ರೆಸ್‍ಕ್ಲಬ್ ತಂಡ ಜಯಶಾಲಿಯಾಗಿ ಹೊರಹೊಮ್ಮಿತು.

error: Content is protected !!