ಮನೆಯಿಂದಲೇ ಕೆಲಸ : ಅಬ್ಕಾರಿಗೆ ತುಂಬಾ ಲಾಸ್ ಅಂತೆ !

03/01/2021

ಮಡಿಕೇರಿ ಜ.3 : ಐಟಿ-ಬಿಟಿ ಉದ್ಯೋಗಿಗಳು, ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುವವರು ಹೆಚ್ಚಾಗಿ ಮನೆಯಿಂದ ಹೊರಹೋಗದಿರುವುದರಿಂದ ಪಬ್, ಬಾರ್ ಗಳಿಗೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದಾಗಿ ಆದಾಯ ಕಡಿಮೆಯಾಗಿದೆ ಎಂದು ನಿನ್ನೆ ಅಬಕಾರಿ ಇಲಾಖೆ ಸಚಿವ ಹೆಚ್ ನಾಗೇಶ್ ನೇತೃತ್ವದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ತಿಳಿದು ಬಂದಿದೆ.
ಅಬಕಾರಿ ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಮನೆಯಿಂದ ಕೆಲಸ ಮಾಡುವ ಸೌಲಭ್ಯವನ್ನು ಕೊನೆಗೊಳಿಸುವಂತೆ ಒತ್ತಾಯಿಸಲು ಇಲಾಖೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಕಳೆದ ವರ್ಷ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಅಬಕಾರಿ ಆದಾಯ ಹೆಚ್ಚಾಗಿದೆ.