ಎಡಪಾಲದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ : ಸಾಧಕರಿಗೆ ಸನ್ಮಾನ

January 4, 2021

ಮಡಿಕೇರಿ ಜ. 4 : ಕ್ರೀಡೆ ಹಾಗೂ ಸದಾ ಸಮಾಜಮುಖಿ ಕೆಲಸಗಳಿಂದ ಸಮಾಜದಲ್ಲಿ ಉತ್ತಮ ಹೆಸರುಗಳಿಸಿರುವ ಫೋರ್ ಸ್ಟಾರ್ ಯುವಕ ಸಂಘ ಎಡಪಲಾ ವತಿಯಿಂದ 7ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಕ್ಕೆ ಚಾಲನೆ ದೊರೆಯಿತು.

ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರ ಪದಕ ವಿಜೇತ ಸರ್ಕಲ್ ಇನ್ಸೆಪೆಕ್ಟರ್ ಸಿ.ಎನ್ ದಿವಾಕರ್, ನರಿಯಂದಡ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೆ‌.ಇ ಮೊಹಮ್ಮದ್ ಹಾಗೂ ರಸೀನಾ ರವರನ್ನು ಫೋರ್ ಸ್ಟಾರ್ ಯುವಕ ಸಂಘ ಸನ್ಮಾನಿ ಗೌರವಿಸಿದರು. ರಸೀನಾರವರ ಅನುಪಸ್ಥಿತಿಯಲ್ಲಿ ಅವರ ಪತಿ ರಜಾಕ್ ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭ ಕಾಂಗ್ರೆಸ್ ಅಲ್ಪಸಂಖ್ಯಾತ ಉಪಾಧ್ಯಕ್ಷ ಹ್ಯಾರಿಸ್ ಮೊಹಮ್ಮದ್, ಮಡಿಕೇರಿ ತಾಲ್ಲೂಕು ಉಪಾಧ್ಯಕ್ಷ ಮೈಸಿ ಕತ್ತಣಿರ, ಕೋಡಿರ ವಿನೋದ್,ಯರಟಂಡ ಮೊಹಮ್ಮದ್ ಹಾಜಿ, ಕುಪ್ಪಂಡ ಬಶೀರ್ ಹಾಜಿ,ತೋಟಂಬೈಲು ಅನಂತ್ ಕುಮಾರ್,ಕುಪ್ಪಂಡ ಶಾಫಿ, ಸಿ.ಆರ್.ಎಫ್ ಉಮ್ಮರ್, ರಾಣಿ ಗಣಪತಿ ಕಡಂಗ,ಯರಟಂಡ ಹನೀಫ್,ಜಾಸೀರ್ ಮೂರ್ನಾಡು,ಅಜೀಝ್,ಫೋರ್ ಸ್ಟಾರ್ ಯುವಕ ಸಂಘದ ಯುಹಿಯಾ,ಸಾಬಿತ್,ಬಶೀರ್, ವಾರಿಸ್ ಹಾಗೂ ಸದಸ್ಯರು ಹಾಜರಿದ್ದರು.

error: Content is protected !!