ಫೋರ್ ಸ್ಟಾರ್ ವಾಲಿಬಾಲ್ ಪಂದ್ಯಾಟ: ಸ್ಟಾರ್ ಬಾಯ್ಸ್ ಗುಂಡಿಗೆರೆ ಚಾಂಪಿಯನ್

January 4, 2021

ಮಡಿಕೇರಿ ಜ. 4 : ಹೊಸ ವರ್ಷದ ಪ್ರಯುಕ್ತ ಜಿಲ್ಲಾ ಯುವಜನ ಮತ್ತು ಕ್ರೀಡಾ ಮಂಡಳಿ ಹಾಗೂ ಫೋರ್ ಸ್ಟಾರ್ ಯುವಕ‌ ಸಂಘದ ವತಿಯಿಂದ 7ನೇ ವರ್ಷದ ಹೊನಲು ಬೆಳಕಿನ ಜಿಲ್ಲಾ ಮಟ್ಟದ ವಾಲಿ ಬಾಲ್ ಪಂದ್ಯಾಟ ಎಡಪಲಾ ಶಾಲಾ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.
ಫೋರ್ ಸ್ಟಾರ್ ವಾಲಿಬಾಲ್ ಪಂದ್ಯಾಟದಲ್ಲಿ ಸ್ಟಾರ್ ಬಾಯ್ಸ್ ಗುಂಡಿಗೆರೆ ಚಾಂಪಿಯನ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಟಿ.ಕೆ ರಾಂಬೋ ಬಜಗೊಲ್ಲಿ ತಂಡ ಪಡೆದುಕೊಂಡಿತು.
ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಸ್ಟಾರ್ ಬಾಯ್ಸ್ ಗುಂಡಿಗೆರೆ ತಂಡ, ಟಿಕೆ ರಾಂಬೋ ತಂಡ ವಿರುದ್ಧ 21-19 ಹಾಗೂ 26-24 ಅಂಕಗಳ ಅಂತರದಿಂದ ಗೆಲುವು ಸಾಧಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.

ಇದಕ್ಕೂ ಮುನ್ನ ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಸ್ಟಾರ್ ಬಾಯ್ಸ್ ಗುಂಡಿಗೆರೆ ಹಾಗೂ ಆತಿಥೇಯ ತಂಡವಾದ ಫೋರ್ ಸ್ಟಾರ್ ತಂಡಗಳ ನಡುವೆ ನಡೆಯಿತು. ಸ್ಟಾರ್ ಬಾಯ್ಸ್ ಗುಂಡಿಗೆರೆ ತಂಡ 21-18 ಹಾಗೂ 22-20 ನೇರ ಸೆಟ್ ಗಳಿಂದ ಜಯಗಳಿಸಿ ಫೈನಲ್ ಪ್ರವೇಶಿಸಿತು.
ಎರಡನೇ ಸೆಮಿಫೈನಲ್ ಪಂದ್ಯವು ಓಯಸಿಸ್ ಹೊದವಾಡ ಹಾಗೂ ಟಿಕೆ ರಾಂಬೋ ಬಜಗೊಲ್ಲಿ ತಂಡಗಳ ನಡುವೆ ನಡೆಯಿತು.
ಟಿಕೆ ರಾಂಬೋ ಬಜಗೊಲ್ಲಿ ತಂಡವು 25-23 ಹಾಗೂ 21-19 ಅಂಕಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.

ಫೋರ್ ಸ್ಟಾರ್ ವಾಲಿಬಾಲ್ ಪಂದ್ಯದಲ್ಲಿ ಒಟ್ಟು 32 ತಂಡಗಳು ಭಾಗವಹಿಸಿದ್ದರು. ಪಂದ್ಯಾಟದ ಬೆಸ್ಟ್ ಅಟೇಕರ್ ಶಿಯಾಬ್ ಸ್ಟಾರ್ ಬಾಯ್ಸ್ ಗುಂಡಿಗೆರೆ, ಉದಯೋನ್ಮುಖ ಆಟಗಾರ‌ ಸ್ಯಾಂಡಿ ಟಿಕೆ ರಾಂಬೋ ಬಜಗೊಲ್ಲಿ,ಬೆಸ್ಟ್ ಲಿಬೆರೋ ಮೂರ್ತಿ ಬಜಗೊಲ್ಲಿ,ಹಾಗೂ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಟಿಕೆ ರಾಂಬೋ ತಂಡದ ರಂಜಿತ್ ಪಡೆದಿಕೊಂಡರು.

ಫೋರ್ ಸ್ಟಾರ್ ಯುವಕ ಸಂಘದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟವು ಕೋವಿಡ್ ಮಾರ್ಗಸೂಚಿಯಂತೆ ಯಶಸ್ವಿಯಾಗಿ ಆಯೋಜಿಸಿದಕ್ಕೆ ಎಲ್ಲಾ ಅತಿಥಿಗಳು ಫೋರ್ ಸ್ಟಾರ್ ಯುವಕ ಸಂಘದ ಸದಸ್ಯರನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಸರ್ಕಲ್ ಇನ್ಸೆಪೆಕ್ಟರ್, ರಾಷ್ಟ್ರ ಪತಿ ಪದಕ ವಿಜೇತ ಸಿ.ಎನ್ ದಿವಾಕರ್, ಕಾಂಗ್ರೆಸ್ ಅಲ್ಪಸಂಖ್ಯಾತ ಉಪಾಧ್ಯಕ್ಷ ಹ್ಯಾರಿಸ್ ಮೊಹಮ್ಮದ್,ಮಡಿಕೇರಿ ತಾಲ್ಲೂಕು ಉಪಾಧ್ಯಕ್ಷ ಮೈಸಿ ಕತ್ತಣಿರ,ಕೋಡಿರ ವಿನೋದ್,ಯರಟಂಡ ಮೊಹಮ್ಮದ್ ಹಾಜಿ, ಕುಪ್ಪಂಡ ಬಶೀರ್ ಹಾಜಿ,ತೋಟಂಬೈಲು ಅನಂತ್ ಕುಮಾರ್,ಕುಪ್ಪಂಡ ಶಾಫಿ, ಸಿ.ಆರ್.ಎಫ್ ಉಮ್ಮರ್, ರಾಣಿ ಗಣಪತಿ ಕಡಂಗ,ಯರಟಂಡ ಹನೀಫ್,ಜಾಸೀರ್ ಮೂರ್ನಾಡು,ಅಜೀಝ್,ಫೋರ್ ಸ್ಟಾರ್ ಯುವಕ ಸಂಘದ ಯುಹಿಯಾ,ಸಾಬಿತ್,ಬಶೀರ್, ಹಾರಿಸ್ ಹಾಗೂ ಸದಸ್ಯರು ಹಾಜರಿದ್ದರು.

error: Content is protected !!