ಸಹಕಾರ ದೂರ ಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನ

January 4, 2021

ಮಡಿಕೇರಿ ಜ. 4 : ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ವತಿಯಿಂದ ಸಹಕಾರ ತರಬೇತಿ ಸಂಸ್ಧೆಯು ದೂರಶಿಕ್ಷಣ ತರಬೇತಿಯನ್ನು ಕೊಡಗು ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಹಕಾರ ಸಂಘ-ಸಂಸ್ಥೆಗಳು ಸಹಕಾರ ವಿಷಯ ಕುರಿತು ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ತರಬೇತಿ ಶಿಕ್ಷಣ ತರಬೇತಿ ನೀಡಲು ಶಿಕ್ಷಣ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ದೂರ ಶಿಕ್ಷಣ ಕೋರ್ಸ್ ಸಹಕಾರ ಸಂಘ/ ಸಂಸ್ಥೆಗಳ ಸಿಬ್ಬಂದಿಗಳಿಗೆ ಮಾತ್ರ ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೋರ್ಸ್ ಅವಧಿ 6 ತಿಂಗಳು. ಸಂಪರ್ಕ ರಹಿತ ಕೋರ್ಸ್ ಪ್ರವೇಶಕ್ಕೆ ಅವಕಾಶ, ಅಧ್ಯಯನ ಸಾಹಿತ್ಯ ನೀಡಲಾಗುವುದು, ತರಬೇತಿ ಕೇಂದ್ರದಲ್ಲಿ ಪ್ರವೇಶ ಪ್ರಾರಂಭವಾಗಿದ್ದು, ಆನ್‍ಲೈನ್ ಮೂಲಕವೂ ಸಹ ಪ್ರವೇಶ ಪ್ರಾರಂಭವಾಗಿದೆ. 10 ದಿನಗಳ ಸಂಪರ್ಕ ತರಗತಿಗಳನ್ನು ನಡೆಸಲಾಗುವುದು. ಪದೋನ್ನತಿ ಹಾಗೂ ವಾರ್ಷಿಕ ಬಡ್ತಿಗೆ ಈ ಕೋರ್ಸ್ ಕಡ್ಡಾಯವಾಗಿದೆ. ಅವಶ್ಯಕತೆ ಇದ್ದಾಗ ಆನ್‍ಲೈನ್ ತರಗತಿ ನಡೆಸಲಾಗುವುದು. ಆನ್‍ಲೈನ್ ಪ್ರವೇಶಾತಿಯ ಲಿಂಕ್ www.kscfdcm.co.in ಹೈಬ್ರಿಡ್ ಮಾದರಿಯಲ್ಲಿ ಆಪ್‍ಲೈನ್ ಮತ್ತು ಆನ್‍ಲೈನ್ ತರಗತಿಗಳು. ಹೆಚ್ಚಿನ ಮಾಹಿತಿಗೆ 08272-228437, 9845318364, 9535250704, 9449245024, 8762110952 ಮತ್ತು 8762925862 ನ್ನು ಸಂಪರ್ಕಿಸಬಹುದು ಎಂದು ಕೆಐಸಿಎಂ ಡಾ.ಆರ್.ಎಸ್.ರೇಣುಕಾ ಅವರು ತಿಳಿಸಿದ್ದಾರೆ.

error: Content is protected !!