ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ ಸಹಕರಿಸಲು ಪೌರಾಯುಕ್ತ ರಾಮದಾಸ್ ಮನವಿ

January 4, 2021

ಮಡಿಕೇರಿ ಜ. 4 : ಪ್ರಸಕ್ತ(2020-21) ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರುವ ಕುರಿತು ಮಾಹಿತಿ ಸಂಗ್ರಹಣೆಗಾಗಿ ಅಭಿವೃದ್ಧಿ ಪಡಿಸಿರುವ ಅರ್ಜಿ (ಅಪ್ಲಿಕೇಶನ್) ನಿರ್ವಹಣೆ ಕಾರ್ಯ ಈಗಾಗಲೇ ನಗರಸಭೆ ವತಿಯಿಂದ ಚಾಲ್ತಿಯಲ್ಲಿದೆ. ಈ ಪ್ರಯುಕ್ತ ನಗರಸಭೆ ಸಿಬ್ಬಂದಿಗಳು ಮನೆ ಮನೆಗೆ ಬರುತ್ತಿದ್ದಾರೆ.
ಈ ಮಾಹಿತಿ ಸಂಗ್ರಹಣೆಗೆ ಅಗತ್ಯವಿರುವ ಕುಟುಂಬ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ನೀಡುವ ಅಗತ್ಯವಿದೆ. ಆದರೆ ಈ ಮಾಹಿತಿ ನೀಡಲು ಕೆಲವು ಕಡೆ ವಿಳಂಬವಾಗುತ್ತಿದ್ದು, ಇದರಿಂದ ಸರ್ವೆ ಕಾರ್ಯ ಪೂರೈಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರತಿ ವಾರ್ಡ್ ಪ್ರತಿ ಮನೆಯ ಪ್ರತಿ ಕುಟುಂಬದವರ ಕುಟುಂಬದ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‍ಗಳನ್ನು ನಗರಸಭೆ ಸಿಬ್ಬಂದಿ ಸಮೀಕ್ಷೆ ನಿಮಿತ್ತ ಮನೆಗೆ ಬರುವಾಗ ಮಾಹಿತಿ ನೀಡಿ ಸಮೀಕ್ಷೆಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್ ಅವರು ತಿಳಿಸಿದ್ದಾರೆ.

error: Content is protected !!