ಕೊಡಗು ಕಾಂಗ್ರೆಸ್ ಕಾನೂನು ಘಟಕದ ನೂತನ ಅಧ್ಯಕ್ಷರಾಗಿ ಎನ್. ಶ್ರೀಧರನ್ ನಾಯರ್ ಆಯ್ಕೆ

January 5, 2021

ಮಡಿಕೇರಿ ಜ. 4 : ಕೊಡಗು ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ನೂತನ ಅಧ್ಯಕ್ಷರಾಗಿ ಎನ್. ಶ್ರೀಧರನ್ ನಾಯರ್ ಅವರನ್ನು ಆಯ್ಕೆ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರ ಒಪ್ಪಿಗೆ ಮೇರೆಗೆ ಕಾನೂನು, ಮಾನವ ಹಕ್ಕು ಮತ್ತು ಆರ್‍ಟಿಐ ವಿಭಾಗದ ರಾಜ್ಯಧ್ಯಕ್ಷ ಎ.ಎಸ್ ಪೆÇನ್ನಣ್ಣ ಅವರು ಆದೇಶ ಹೊರಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾನೂನು ರಾಜ್ಯ ಘಟಕವನ್ನು ವಿಸ್ತರಿಸಿದ್ದು, ಉಪಾಧ್ಯಕ್ಷರಾಗಿ ವಕೀಲ, ಜಿ.ಪಂ ಮಾಜಿ ಸದಸ್ಯ ಹಾಗೂ ಹಿರಿಯ ಮುಖಂಡ ಎಂ.ಎಸ್ ವೆಂಕಟೇಶ್, ಕಾರ್ಯದರ್ಶಿಯಾಗಿ ಬಿ.ಕೆ ಬೋಪಣ್ಣ ಹಾಗೂ ಕೆಪಿಸಿಸಿ ಕಾನೂನು ಘಟಕದ ಸಮಿತಿ ಸದಸ್ಯರಾಗಿ ಎ.ಜೆ ಮೇರಿ ಅವರನ್ನು ಆಯ್ಕೆಮಾಡಲಾಗಿದೆ.
ಹೈಕೋರ್ಟ್ ಹಿರಿಯ ವಕೀಲ ಹೆಚ್.ಎಸ್ ಚಂದ್ರಮೌಳಿ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗಿದೆ.

Sridharan Nair
Bopanna
H.S. CHANDRAMOULI
Mary Joseph
Venkatesh

error: Content is protected !!