ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಮೊಬೈಲ್ ಕಳ್ಳತನ : ಇಬ್ಬರ ಬಂಧನ

January 5, 2021

ಮಡಿಕೇರಿ ಜ.5 : ಕೊಡಗು ವೈದ್ಯಕೀಯ ಕಾಲೇಜಿನ ಕಾರ್ಮಿಕರ ಮೊಬೈಲ್ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಡಿಕೇರಿಯ ಆಜಾದ್ ನಗರದ ನಿವಾಸಿ ಆಟೋ ಚಾಲಕ ಅಬ್ದುಲ್ ಖಾದರ್ (24) ಹಾಗೂ ರಾಜರಾಜೇಶ್ವರಿ ನಗರದ ಸೆಂಟ್ರಿಂಗ್ ಕೆಲಸಗಾರ ಮಿತ್ತಾದ್ ಎಂ.ಇ (26) ಎಂಬುವವರೇ ಬಂಧಿತ ಆರೋಪಿಗಳು. ಕಳವು ಮಾಡಿದ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ವೈದ್ಯಕೀಯ ಕಾಲೇಜಿನ ಕಾರ್ಮಿಕರು ತಂಗುವ ಶೆಡ್ ನಿಂದ ಸುಭಾಷ್, ಜಿತ್ತು ಮಲ್ಲಿಕ್, ಮುನ್ನ ಗುಪ್ತ ಎಂಬುವವರಿಗೆ ಸೇರಿದ ಒಟ್ಟು 24,500 ರೂ. ಮೌಲ್ಯದ ಮೂರು ಮೊಬೈಲ್ ಫೋನ್ ಗಳು ಡಿ.30 ರಂದು ಕಳ್ಳತವಾಗಿತ್ತು. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಗ್ರಾಮಾಂತರ ಠಾಣೆ ಅಪರಾಧ ವಿಭಾಗದ ಪಿಎಸ್‍ಐ ಸದಾಶಿವ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮಂಜುನಾಥ್, ರವಿಕುಮಾರ್, ಸೋಮಶೇಖರ್, ಸಜ್ಜನ್ ಪಾಲ್ಗೊಂಡಿದ್ದರು. ಪೊಲೀಸರ ತನಿಖಾ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಶ್ಲಾಘಿಸಿದ್ದಾರೆ.

error: Content is protected !!