ಚೀನೀ ಕೋಟ್ಯಾಧಿಪತಿ, ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಕಣ್ಮರೆ!

06/01/2021

ನವದೆಹಲಿ ಜ. 6 : ಚೀನಾದ ಟೆಕ್ ದೈತ್ಯಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಇದ್ದಕ್ಕಿದ್ದಂತೆ “ಕಣ್ಮರೆಯಾಗಿದ್ದಾರೆ” ಎಂಬ ಸುದ್ದಿ ಚೀನಾ ಹಾಗೂ ಜಗತ್ತಿನ ಉದ್ಯಮ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಚೀನಾದ ಆಡಳಿತ ಮುಖ್ಯಸ್ಥ ಕ್ಸಿ ಜಿನ್​ಪಿಂಗ್ ರೊಡನೆ ನಡೆದ ಸಂಘರ್ಷದ ತರುವಾಯ ಜಾಕ್ ಮಾ ಕಳೆದ ಎರಡು ತಿಂಗಳುಗಳಿಂಡ ಪತ್ತೆಯಾಗಿಲ್ಲ.

‘ಆಫ್ರಿಕಾದ ಬಿಸಿನೆಸ್ ಹೀರೋಸ್’ ಎಂಬ ಟಿವಿ ಕಾರ್ಯಕ್ರಮದ ಫೈನಲ್‌ನಲ್ಲಿ ಜಾಕ್ ಮಾ ಅವರನ್ನು ತೀರ್ಪುಗಾರರನ್ನಾಗಿ ನೇಮಕ ಮಾಡಲಾಗಿತ್ತು.ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ಆದರೆ ಅವರ ಭಾವಚಿತ್ರವನ್ನೀಗ ತೀರ್ಪುಗಾರರ ಅಧಿಕೃತ ವೆಬ್ ಪುಟದಿಂದ ತೆಗೆದುಹಾಕಲಾಗಿದೆ. ಈ ಕಾರ್ಯಕ್ರಮದ ಫೈನಲ್ ಸುತ್ತು ನವೆಂಬರ್ ನಲ್ಲಿ ನಡೆದಿತ್ತು. ಜಾಕ್ ಮಾ “ಚೀನಾದ ಆಡಳಿತ ಮುಖ್ಯಸ್ಥರು ಮತ್ತು ಅದರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಟೀಕಿಸುವ ಮಾತನ್ನಾಡಿದ ಸ್ವಲ್ಪ ಸಮಯದ ನಂತರ ಜಾಕ್ ಮಾ ಅವರನ್ನು ಬೀಜಿಂಗ್‌ನ ಅಧಿಕಾರಿಗಳು ಕರೆದೊಯ್ದಿದ್ದರು. ಅವರ ಕಂಪನಿಯ 37 ಬಿಲಿಯನ್ ಇನಿಶಿಯಲ್​ ಪಬ್ಲಿಕ್​ ಆಫರ್​ ನ್ನು ಅಮಾನತುಗೊಳಿಸಲಾಗಿದೆ. ನಂತರ ಅವರು ಎಲ್ಲಿಯೂ ಪತ್ತೆಯಾಗಿಲ್ಲ” ವರದಿ ತಿಳಿಸಿದೆ.

“ಶೆಡ್ಯೂಲ್ ನಲ್ಲಿನ ಒತ್ತಡದಿಂದಾಗಿ ಜಾಕ್ ಮಾ ಈ ವರ್ಷದ (2020) ಆಫ್ರಿಕಾದ ಬಿಸಿನೆಸ್ ಹೀರೋಸ್‌ನ ಅಂತಿಮ ತೀರ್ಪುಗಾರರ ಸಮಿತಿಯ ಭಾಗವಾಗಲು ಸಾಧ್ಯವಿಲ್ಲ” ಎಂದು ಅಲಿಬಾಬಾದ ವಕ್ತಾರರು ಹೇಳಿದ್ದಾರೆ.

ಕಳೆದ ತಿಂಗಳು, ಚೀನಾದ ಉನ್ನತ ಮಾರುಕಟ್ಟೆ ನಿಯಂತ್ರಕ ಇ-ಕಾಮರ್ಸ್ ದೈತ್ಯ ಅಲಿಬಾಬಾ ಅವರ ಸ್ಪರ್ಧಾತ್ಮಕ-ವಿರೋಧಿ ಅಭ್ಯಾಸಗಳ ಬಗ್ಗೆ ತನಿಖೆ ಪ್ರಾರಂಭಿಸಿದಾಗ, ದೇಶವು ಮಾ’ ಅವರ ಫಿನ್‌ಟೆಕ್ ಸಾಹಸೋದ್ಯಮ ಆಂಟ್ ಗ್ರೂಪ್‌ಗಾಗಿ “ರೆಕ್ಟಿಫಿಕೇಷನ್ ಪ್ಲಾನ್”ರೂಪಿಸಿತು.