ಸೋಮವಾರಪೇಟೆಯಲ್ಲಿ ಪುಷ್ಪಗಿರಿ ಜೆಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

January 6, 2021

ಮಡಿಕೇರಿ ಜ. 7 : ಪ್ರತಿಯೊಬ್ಬರೂ ನನ್ನಿಂದ ಮಾತ್ರ ಸಾಧ್ಯ ಎಂದಾಗಲೇ ಅದ್ವಿತೀಯವಾದುದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಜೆಸಿಐ ವಲಯ ಅಧ್ಯಕ್ಷ ಭರತ್ ಆಚಾರ್ಯ ಅಭಿಪ್ರಾಯಪಟ್ಟರು.

ಸೋಮವಾರಪೇಟೆಯಲ್ಲಿ ಆಯೋಜಿಸಿದ್ದ ಪುಷ್ಪಗಿರಿ ಜೆಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಸಮಾಜ ಸೇವೆ ಮಾಡುವಾಗ ಇತರರು ಮಾಡಲಿ ನಂತರ ನಾವು ಕೈ ಜೋಡಿಸೋಣ ಎಂದು ನಿರೀಕ್ಷಿಸುವುದೇ ತಪ್ಪು. ಬದಲಿಗೆ ನಾನೇ ಮೊದಲು ಮಾಡುತ್ತೇನೆ ಎಂದು ಹೊರಟರೆ ಉತ್ತಮ ಸೇವೆ ಮಾಡಬಹುದು ಎಂದರು.
ಜೆಸಿಐ ಸಂಸ್ಥೆಯು ತನ್ನ ಸದಸ್ಯರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ನಾಯಕರನ್ನಾಗಿ ಬೆಳೆಸಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸುತ್ತಿರುವ ಜಗತ್ತಿನ ಏಕೈಕ ಸಂಸ್ಥೆ ಎಂದು ಹೇಳಿದರು.
ಜೆಸಿಐ ಮಾಜಿ ವಲಯ ಉಪಾಧ್ಯಕ್ಷೆ ಮಮತ ಹರೀಶ್ ಮಾತನಾಡಿ, ಜೆಸಿಐನ ಹಿಂದಿನ ಅಧ್ಯಕ್ಷರಾದ ಉಷಾ ರಾಣಿ ಅವರು ಅಭೂತಪೂರ್ವ ಸಾಧನೆ ಮೆರೆದಿದ್ದು, ಹೆಚ್ಚಿನ ಬಹುಮಾನ ಪದಕಗಳನ್ನು ಪಡೆಯಲು ಕಾರಣಕರ್ತರಾಗಿದ್ದಾರೆ ಎಂದು ಶ್ಲಾಘಿಸಿದರು.
ಅಲ್ಲದೆ ಮಂಡ್ಯದಲ್ಲಿಯೂ ನೂತನ ಘಟನವೊಂದನ್ನು ತೆರೆಯುವಲ್ಲಿ ಯಶಸ್ವಿಯಾಗಿರುವ ಪುಷ್ಪಗಿರಿ ಜೆಸಿಐ ಸಂಸ್ಥೆಯನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜೆಸಿಐ ವಲಯ ಅಧ್ಯಕ್ಷ ಬಾಬು ರಾವ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಮಾಯಾ ಗಿರೀಶ್ ಮಾತನಾಡಿ, ಈ ಸಾಲಿನಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದರು, ಎಲ್ಲರ ಸಹಕಾರ ಅಗತ್ಯವೆಂದರು.

error: Content is protected !!