ಸಿಹಿ ಮತ್ತು ಖಾರ ಮಿಶ್ರಿತ ಆಲೂದಮ್ ರೆಸಿಪಿ

January 6, 2021

ಬೇಕಾಗುವ ಸಾಮಾಗ್ರಿಗಳು: ಆಲೂಗೆಡ್ಡೆ 5-6 (ಬೇಯಿಸಿದ್ದು), ಈರುಳ್ಳಿ 2, ಟೊಮೆಟೊ 1, ಹಸಿ ಮೆಣಸಿನಕಾಯಿ 3-4, ಶುಂಠಿ ಪೇಸ್ಟ್ 1 ಚಮಚ, ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಅರಿಶಿಣ ಪುಡಿ ಅರ್ಧ ಚಮಚ, ತೆಂಗಿನ ತುರಿ 1 ಚಮಚ, ಕೆಂಪು ಮೆಣಸಿನ ಪುಡಿ 1/2 , ಚಮಚ, ಕೊತ್ತಂಬರಿ ಪುಡಿ 2 ಚಮಚ, ಟೊಮೆಟೊ ಪೇಸ್ಟ್ ಅರ್ಧ ಕಪ್, ಲವಂಗ 1, ಹುಣಸೆ ಹಣ್ಣಿನ ರಸ 2 ಚಮಚ, ಚಕ್ಕೆ 1 ಪೀಸ್, ಏಲಕ್ಕಿ 1, ಪಲಾವ್ ಎಲೆ 1, ಎಣ್ಣೆ, ರುಚಿಗೆ ತಕ್ಕ ಉಪ್ಪು, ಸಕ್ಕರೆ 1 ಚಮಚ

ತಯಾರಿಸುವ ವಿಧಾನ: ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.ಈಗ ಒಂದು ಬಟ್ಟಲಿನಲ್ಲಿ ಹುಣಸೆ ಹಣ್ಣಿನ ರಸ, ಖಾರದ ಪುಡಿ, ಕೊತ್ತಂಬರಿ ಪುಡಿ, ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಕಲೆಸಿ. ನಂತರ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಪಲಾವ್ ಎಲೆ, ಚಕ್ಕೆ ಮತ್ತು ಏಲಕ್ಕಿ ಹಾಕಬೇಕು. ಈಗ ರುಬ್ಬಿದ ಮಿಶ್ರಣವನ್ನು ಹಾಕಿ 2-3 ನಿಮಿಷ ಹುರಿದು ನಂತರ ಕಲೆಸಿದ ಮಸಾಲೆಯನ್ನು ಹಾಕಿ ಸ್ವಲ್ಪ ನೀರು ಹಾಕಿ ಕುದಿಸಬೇಕು. ಟೊಮೆಟೊ ಪೇಸ್ಟ್ ಹಾಕಿ, ನಂತರ ತೆಂಗಿನ ತುರಿ, ಗರಂ ಮಸಾಲ ಸೇರಿಸಬೇಕು. ಮಿಶ್ರಣ ಕುದಿ ಬರುವಾಗ ಒಂದು ಆಲೂಗೆಡ್ಡೆಯನ್ನು 4 ತುಂಡುಗಳಾಗಿ ಮಾಡಿ ಗ್ರೇವಿಯಲ್ಲಿ ಹಾಕಿ, ಸಕ್ಕರೆ ಸೇರಿಸಿ ಕುದಿಸಿ. ಮಿಶ್ರಣ ಗ್ರೇವಿ ರೀತಿಯಲ್ಲಿ ಆದ ತಕ್ಷಣ ಉರಿಯಿಂದ ಇಳಿಸಿ. ಈಗ ಆಲೂದಮ್ ರೊಟ್ಟಿ ಅಥವಾ ಚಪಾತಿ ಜೊತೆ ತಿನ್ನಲು ರೆಡಿ.

error: Content is protected !!