Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
4:39 AM Friday 22-October 2021

ನಿಸರ್ಗ ಜೇಸಿ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭ : ಸಮಾಜಸೇವೆ ಪ್ರಚಾರಕ್ಕೆ ಸೀಮಿತವಾಗದಿರಲಿ- ಹಿರಿಯ ಪತ್ರಕರ್ತ ಬಿ.ಜಿ. ಅನಂತಶಯನ

06/01/2021

ಮಡಿಕೇರಿ ಜ.6 : ಕೇವಲ ಪ್ರಚಾರಕ್ಕಾಗಿ ಮಾಡುವ ಕೃತಕ ಸಮಾಜಸೇವೆ ಶಾಶ್ವತವಾಗಿ ಉಳಿಯುವುದಿಲ್ಲ. ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುವ ಜನಸೇವೆ ಸದಾ ಜೀವಂತವಾಗಿರುತ್ತದೆ. ಆದ್ದರಿಂದ ಯಾವುದೇ ಸಮಾಜಸೇವೆ ಪ್ರಚಾರಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ‘ಶಕ್ತಿ’ ದಿನ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅಭಿಪ್ರಾಯಪಟ್ಟಿದ್ದಾರೆ.

ಗೋಣಿಕೊಪ್ಪಲಿನ ಎಪಿಎಂಸಿ ಸಭಾಂಗಣದಲ್ಲಿ ನಡೆದ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ಘಟಕದ 10ನೇ ಘಟಕಾಡಳಿತ ಮಂಡಳಿಯ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕೇವಲ ನೂರಾರು ರೂಪಾಯಿ ಮೊತ್ತದ ಹಣ ಖರ್ಚು ಮಾಡಿ ಲಕ್ಷಾಂತರ ಮೊತ್ತದ ಹಣ ಉದಾರವಾಗಿ ಖರ್ಚು ಮಾಡಿದಂತೆ ಪ್ರಚಾರ ಬಯಸುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚುತ್ತಿದೆ. ಇದು ನಾಗರಿಕ ಸಮಾಜದ ಉತ್ತಮ ಲಕ್ಷಣ ಅಲ್ಲ. ಜನ ಇದನ್ನೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ಬೆಲೆ ಕಲ್ಪಿಸುತ್ತಾರೆ. ಸಮಾಜಕ್ಕೆ ಮೋಸ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸ್ನೇಹಪರತೆ, ಸರಳತೆ ಮತ್ತು ಸಮರ್ಪಣಾ ಮನೋಭಾವನೆ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದಾಗಿದೆ. ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಇದನ್ನು ಸುಲಭವಾಗಿ ರೂಡಿಸಿಕೊಳ್ಳಲು ಸಾಧ್ಯವಿದೆ. ಆದರೆ ಕೇವಲ ವೈಯುಕ್ತಿಕ ಬೆಳವಣಿಗೆಯನ್ನು ಮಾತ್ರ ಬಯಸಿದರೆ ಅದರಿಂದ ಸಂಘಟನೆಗಳಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ ಅನಂತಶಯನ ಅವರು, ಸಂಘ-ಸಂಸ್ಥೆಗಳ ಬೆಳವಣಿಗೆಯೊಂದಿಗೆ ತಮ್ಮ ವೈಯುಕ್ತಿಕ ಬೆಳವಣಿಗೆಯನ್ನು ನಿರೀಕ್ಷಿಸುವುದು ತಪ್ಪಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ಸಂಘ-ಸಂಸ್ಥೆಗಳಿಗೆ ಸೇರ್ಪಡೆಯಾಗಲು ನಿಸ್ವಾರ್ಥ ಸೇವೆ ಮಾನದಂಡವಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಸಮಾಜದ ಬೆಳವಣಿಗೆಯಲ್ಲಿ ಸರಕಾರೇತರ ಸಂಘ ಸಂಸ್ಥೆಗಳ ಪಾತ್ರವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಸರಕಾರದಿಂದ ಆಗದ ಬಹಳಷ್ಟು ಕೆಲಸಗಳು ಸಂಘ-ಸಂಸ್ಥೆಗಳ ಮೂಲಕ ನೆರವೇರಿದೆ. ಆದ್ದರಿಂದ ಸಂಘಟನೆಗಳು ಹೆಚ್ಚಾದಂತೆ ಸಮಾಜ ಉನ್ನತಿಯತ್ತ ಹೆಜ್ಜೆ ಇಡುತ್ತದೆ ಎಂದು ನುಡಿದ ಅವರು, ಯಾವುದೇ ಕೆಲಸ ಮಾಡಬೇಕಾದರೆ ಗುರಿಮುಖ್ಯ. ಗುರಿಗೆ ಪೂರಕವಾಗಿ ಸಂಘ-ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ. ನಿರ್ದಿಷ್ಟ ಗುರಿಯೊಂದಿಗೆ ಕೆಲಸ ನಿರ್ವಹಿಸದಿದ್ದಲ್ಲಿ ಯಾವ ಸಮಾಜಸೇವೆಯೂ ಯಶಸ್ವಿಯಾಗುವುದಿಲ್ಲ. ಸಾಮಾಜಿಕ ಸಂಘಟನೆಗಳು ಎಂದಿಗೂ ನಿಂತ ನೀರಾಗಬಾರದು. ತನ್ನ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುತ್ತಾ ಜನರ ಬಳಿ ಅದನ್ನು ಕೊಂಡೊಯ್ಯಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಮತ್ತೋರ್ವ ಮುಖ್ಯ ಅತಿಥಿಗಳಾಗಿದ್ದ ಭಾರತೀಯ ಜೇಸಿಸ್ ನ ವಲಯ14ರ ವಲಯಾಧ್ಯಕ್ಷರಾದ ಭರತ್ ಎನ್. ಆಚಾರ್ಯ ಅವರು ಮಾತನಾಡಿ, ಜೇಸಿ ಸಂಸ್ಥೆ ಕೇವಲ ಸಮಾಜಸೇವೆಯನ್ನಷ್ಟೇ ಮಾಡುವ ಏಕಗವಾಕ್ಷಿ ಪದ್ಧತಿಯಿಂದ ವಿಮುಖವಾಗಿದೆ.
ಮನುಷ್ಯ ವಿಕಸಿತ ವ್ಯಕ್ತಿತ್ವ ಹೊಂದಿದರೆ ಮಾತ್ರ ಸಮಾಜಮುಖಿಯಾಗಲು ಸಾಧ್ಯ. ವ್ಯಕ್ತಿತ್ವ ವಿಕಸನವೇ ಜೇಸಿಸ್ ನ ಮೂಲ ಗುರಿ. ಸೇವೆಗಿಂತ ಮೊದಲು ಸೇವೆಗೈಯುವ ವಿಧಾನ ಮತ್ತು ಉದ್ದೇಶ ಮುಖ್ಯವಾಗಿರುತ್ತದೆ. ಈ ಕುರಿತು ಸ್ಪಷ್ಟ ಆಶಯ ಹೊಂದಿರುವ ಸಮಾಜ ಸೇವಕರನ್ನು ಸೃಷ್ಟಿಸುವ ಸ್ವಯಂ ಕಲಿಕಾ ವಿಶ್ವವಿದ್ಯಾಲಯವೇ ಜೇಸಿಸ್ ಎಂದು ವಿವರಿಸಿದರು.

ಜೇಸಿಸ್ ನಲ್ಲಿ ಇಂದು ಸಾಕಷ್ಟು ವಿಪುಲ ಅವಕಾಶಗಳಿವೆ. ವ್ಯವಹಾರ, ತರಬೇತಿ, ಸ್ನೇಹಮಿಲನ, ಸಂಪರ್ಕ ಮೊದಲಾದ ಮನುಷ್ಯನಿಗೆ ತನ್ನ ವಿಕಸನಕ್ಕಾಗಿ ಅಗತ್ಯವಿರುವ ಪೂರಕ ವ್ಯವಸ್ಥೆಗಳ ಬಾಗಿಲು ಆಸಕ್ತರಿಗೆ ಇಲ್ಲಿ ಸದಾ ತೆರೆದಿರುತ್ತದೆ. ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಎಂದು ದೃಢವಾಗಿ ನಂಬಿರುವ ಏಕೈಕ ಅಂತರಾಷ್ಟ್ರೀಯ ಸಂಘಟನೆ ಜೇಸಿಸ್ ಆಗಿದೆ. ಮಾನವಕುಲದ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ ಎಂಬ ಸತ್ಯವನ್ನು ಜಗತ್ತಿಗೇ ಹೇಳಿದ ಸಂಸ್ಥೆಯಿದು ಎಂದು ಭರತ್ ಆಚಾರ್ಯ ಅವರು ಬಣ್ಣಿಸಿದರು.

ವಲಯ 14ರ ‘ಎ’ ಪ್ರಾಂತ್ಯ ವಲಯ ಉಪಾಧ್ಯಕ್ಷರಾದ ಎಂ.ಬಾಬು ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಜೇಸಿ ಮೂಲಕ ಆರ್ಥಿಕವಾಗಿ ಸದೃಢರಾಗಬಹುದು. ಸಂಸ್ಥೆಯಲ್ಲಿ ದೊರಕುವ ಗೆಳೆತನ ಮತ್ತು ಪರಿಚಯದ ಮೂಲಕ ಆರ್ಥಿಕ ವಹಿವಾಟುಗಳನ್ನು ಉತ್ತಮಪಡಿಸಿಕೊಳ್ಳಬಹುದು. ಏನೂ ಇಲ್ಲವೆಂದರೂ ಉತ್ತಮ ಮನುಷ್ಯರಾಗಿ ರೂಪಿತವಾಗಬಹುದು ಎಂದು ಅಭಿಪ್ರಾಯಪಟ್ಟರು.

ಘಟಕದ ನೂತನ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಉಪನ್ಯಾಸಕ ಎಂ.ಎನ್.ವನೀತ್ ಕುಮಾರ್ ಅವರಿಗೆ ನಿಕಟ ಪೂರ್ವ ಅಧ್ಯಕ್ಷ ಆಪಟ್ಟೀರ ಟಾಟು ಮೊಣ್ಣಪ್ಪ ಅವರು ಪ್ರಮಾಣ ವಚನ ಬೋಧಿಸಿ, ನಂತರ ಅಧ್ಯಕ್ಷರ ಕಾಲರ್ ಮತ್ತು ಗ್ಯಾವಲ್ ಅನ್ನು ಹಸ್ತಾಂತರಿಸಿದರು. ಘಟಕಾಡಳಿತ ಮಂಡಳಿಯ ಉಳಿದ ಪದಾಧಿಕಾರಿಗಳಿಗೆ ನೂತನ ಅಧ್ಯಕ್ಷರು ಪ್ರಮಾಣ ವಚನ ಬೋಧಿಸಿದರು.

ಕಾರ್ಯಕ್ರಮದಲ್ಲಿ ಟಿ.ಜಿ. ಲಿಖಿತ್ ಕುಮಾರ್, ಸಿ.ಆರ್.ಹರೀಶ್, ಸಿ.ಬಿ.ಸೋಮಣ್ಣ, ಕೆ.ಪಿ.ರಹೀಸ್, ವಿ. ಎನ್.ಉತ್ತಪ್ಪ, ಶರತ್ ಸೋಮಣ್ಣ, ಪಿ.ಪಿ. ಮಂಜು ಬೋಪಣ್ಣ, ಸಿ. ಡಿ.ಮುತ್ತಪ್ಪ ಅವರು ಘಟಕಕ್ಕೆ ನೂತನ ಸದಸ್ಯರಾಗುವ ಮೂಲಕ ಜೇಸಿಸ್ ಗೆ ಸೇರ್ಪಡೆಯಾದರು

ಪೊನ್ನಂಪೇಟೆಯ ನಿವೃತ್ತ ಮುಖ್ಯ ಶಿಕ್ಷಕ ಎಂ.ಎಸ್.ಕುಶಾಲಪ್ಪ ಅವರನ್ನು ಘಟಕದ ದಶಮಾನೋತ್ಸವದ ಪ್ರಯುಕ್ತ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಇದರೊಂದಿಗೆ ಮುಖ್ಯಮಂತ್ರಿಗಳ ಎನ್.ಸಿ.ಸಿ. ಪ್ರಶಂಸನಾ ಪದಕ ಪಡೆದ ಘಟಕದ ಸ್ಥಾಪಕ ಉಪಾಧ್ಯಕ್ಷ ಕ್ಯಾಪ್ಟನ್ ಬಿ.ಎಂ.ಗಣೇಶ್, ಮಾಯಮುಡಿ ಗ್ರಾ. ಪಂ.ಗೆ 4ನೇ ಬಾರಿಗೆ ಆಯ್ಕೆಯಾದ ಘಟಕದ ಸ್ಥಾಪಕ ನಿರ್ದೇಶಕರಾದ ಆಪಟ್ಟಿರ ಟಾಟು ಮೊಣ್ಣಪ್ಪ ಅವರನ್ನು ಘಟಕದ ಪರವಾಗಿ ಸನ್ಮಾನಿಸಲಾಯಿತು. ಘಟಕದ ಸ್ಥಾಪಕ ಅಧ್ಯಕ್ಷರಾದ ರಫೀಕ್ ತೂಚಮಕೇರಿ ಸನ್ಮಾನಿತರ ಸಾಧನಾ ಪಟ್ಟಿಯನ್ನು ಮಂಡಿಸಿದರು.

ಆರಂಭದಲ್ಲಿ ನಿಖಿತಾ ಜೇಸಿ ವಾಣಿ ವಾಚಿಸಿದರು. ಪೂರ್ವಾಧ್ಯಕ್ಷರಾದ ಬಿ. ಈ. ಕಿರಣ್ ಸ್ವಾಗತಿಸಿದರು. ಎ.ಪಿ. ದಿನೇಶ್ ನೂತನ ಸದಸ್ಯರನ್ನು ಪರಿಚಯಿಸಿದರು. ಎಚ್.ಆರ್. ಸತೀಶ್, ಎಂ.ಎಸ್. ಸರ್ಫುದ್ದೀನ್, ಎನ್. ಜಿ.ಸುರೇಶ್, ನೀತ್ ಅಯ್ಯಪ್ಪ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಎ.ಪಿ.ದಿನೇಶ್ ಕುಮಾರ್ ವಂದಿಸಿದರು.

????????????????????????????????????