ಕೆಲಸಕ್ಕೆಂದು ಹೊರಹೊದ ವ್ಯಕ್ತಿ ನಾಪತ್ತೆ

06/01/2021

ಮಡಿಕೇರಿ ಜ. 7 : ಕೆಲಸಕ್ಕೆಂದು ಮನೆಯಿಂದ ಹೊರಹೋದ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಂಬೆಕಾಡು ವೆಸ್ಟ್ ನೆಮ್ಮಲೆ ಗ್ರಾಮದ ಕೂಲಿ ಕಾರ್ಮಿಕ ಪಿ.ಪಿ. ಸುರೇಶ್ (39) ಎಂಬುವವರೆ ಕಾಣೆಯಾದವರು. ಈ ಹಿಂದೆ ಕೆಲಸಕ್ಕೆಂದು ಮನೆಯಿಂದ ಹೋಗಿ ಒಂದೇ ಜಾಗದಲ್ಲಿ ಸ್ಥಿರವಾಗಿ ಕೆಲಸ ಮಾಡದೇ ಒಂದೊಂದು ಬಾರಿಯೂ ಒಂದೊಂದು ಕಡೆಯಲ್ಲಿ ಕೆಲಸ ಮಾಡುತ್ತಿದ್ದವರು ಐದು ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು. ಅಲ್ಲದೇ ಇತರರ ಮೊಬೈಲ್‍ನಿಂದ ದೂರವಾಣಿ ಕರೆ ಮಾಡುತ್ತಿದ್ದರು.
ಆದರೆ ಫೆ. 26 ರಂದು ಕೆಲಸಕ್ಕೆಂದು ಹೊರಹೊದವರು ಹನ್ನೊಂದು ತಿಂಗಳಾದರು ವಾಪಸ್ಸು ಹಿಂದಿರುಗಲಿಲ್ಲ. ಅಲ್ಲದೇ ಯಾವುದೇ ದುರವಾಣಿ ಕರೆಯನ್ನು ಮಾಡಿಲ್ಲ ಎಂದು ಸುರೇಶ್ ಅವರ ಪುತ್ರ ಪಿ.ಎಸ್. ಸೋಮಣ್ಣ ದೂರಿನಲ್ಲಿ ತಿಳಿಸಿದ್ದಾರೆ.
ಸುರೇಶ್ ಅವರು ಕನ್ನಡ ಭಾಷೆ ಮಾತನಾಡುವವರಾಗಿದ್ದು, ಪತ್ತೆಯಾದಲ್ಲಿ ಶ್ರೀಮಂಗಲ ಪೊಲೀಸ್ ಠಾಣೆ 08274-246246 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.