‘ಕತ್ತಲೆಕಾಡು ಚಾಂಪಿಯನ್ಸ್ ಲೀಗ್’ ಕ್ರಿಕೆಟ್ ಪಂದ್ಯಾವಳಿಗೆ ಜ. 8 ರಂದು ಚಾಲನೆ

January 6, 2021

ಮಡಿಕೇರಿ ಜ. 6 : ‘ಕತ್ತಲೆಕಾಡು ಚಾಂಪಿಯನ್ಸ್ ಲೀಗ್’ ಪ್ರಥಮ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಜ. 8 ರಂದು ಚಾಲನೆ ದೊರೆಯಲಿದೆ.
ಮಾದೇಟಿರ ರಾಜ ಅವರ ತಲಾಟ್ ಮೈದಾನದಲ್ಲಿ ಜ. 8, 9, 10 ರಂದು ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಗೆ ಜ. 8 ರಂದು ಬೆಳಿಗ್ಗೆ 8.30ಕ್ಕೆ ಕಾಫಿ ಬೆಳೆಗಾರ ಮಾದೇಟಿರ ರಾಜ ಚಾಲನೆ ನೀಡಲಿದ್ದಾರೆ.
ಕೆಸಿಎಲ್ ಸಮಿತಿ ಅಧ್ಯಕ್ಷ ಬಿ.ಎನ್. ರಾಜೇಶ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಪೆÇಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕ್ಲೋಸ್‍ಬರ್ನ್ ಸಹಿಪ್ರಾ ಶಾಲೆ ಮುಖ್ಯ ಶಿಕ್ಷಕಿ ಸುಜಾತ, ಗುತ್ತಿಗೆದಾರ ಬಿ.ಡಿ. ನಾರಾಣಯ ರೈ, ಬೆಳೆಗಾರ ವಿನೋದ್ ಕುಮಾರ್, ಉದ್ಯಮಿಗಳಾದ ಟಿ.ಆರ್. ವಾಸುದೇವ್, ರಮೇಶ್ ರೈ, ನಾಸರ್, ಮುಸ್ತಫಾ, ಗೋಪಿ, ಯೂಸುಫ್ ಕಡಗದಾಳು ಗ್ರಾ.ಪಂ ಸದಸ್ಯರಾದ ಎಂ.ಎಸ್. ಶಂಭಯ್ಯ, ಆನಂದ, ಮರಗೋಡು ಗ್ರಾಪಂ ಸದಸ್ಯ ಪರಿಚನ ಶರತ್, ನಂದಕುಮಾರ್, ಹಾಕತ್ತೂರು ಗ್ರಾಪಂ ಸದಸ್ಯ ಬಿ.ವಿ. ಯೋಗೇಶ್ ಪಾಲ್ಗೊಳ್ಳಲಿದ್ದಾರೆ.
ಕೊನೆಯ ದಿನವಾದ ಜ. 10ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಮಡಿಕೇರಿ ಡಿವೈಎಸ್ಪಿ ಬಾರಿಕೆ ದಿನೇಶ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.
ಅತಿಥಿಗಳಾಗಿ ಗುತ್ತಿಗೆದಾರರಾದ ಬಿ.ಎನ್. ಕರುಣಾಕರ ರೈ, ಕಿರಣ್, ಕಡಗದಾಳು ಗ್ರಾಪಂ ಮಾಜಿ ಅಧ್ಯಕ್ಷ ಮಾದೇಟಿರ ತಿಮ್ಮಯ್ಯ, ಸದಸ್ಯ ಬಿ.ಟಿ ಜಯಣ್ಣ, ಪ್ರಮುಖರಾದ ವಿವೇಕ್, ಕರ್ಪಸ್ವಾಮಿ, ಲೋಕೇಶ್ ರೈ, ಹಮೀದ್, ಉಮೇಶ್ ರೈ ಭಾಗವಹಿಸಲಿದ್ದಾರೆ.
ಈ ಸಂದರ್ಭ ಮಾಜಿ ಸೈನಿಕರಾದ ಡಿ.ಎಚ್. ಗಣೇಶ್, ನಾರಾಯಣ, ಬೆಳೆಗಾರ ಮಾದೇಟಿರ ರಾಜ ಅವರನ್ನು ಸನ್ಮಾನಿಸಲಾಗುವುದು.
ಮೂರು ದಿನ ನಡೆಯುವ ಪಂದ್ಯಾವಳಿಯಲ್ಲಿ 9 ತಂಡ ಭಾಗವಹಿಸಲಿದ್ದು, ಕಡಗದಾಳು ಗ್ರಾ.ಪಂ ಹಾಗೂ ಹುಲಿತಾಳ, ಇಬ್ನಿವಳವಾಡಿ ವ್ಯಾಪ್ತಿಯ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ವಿಜೇತ ಡಂತಕ್ಕೆ ಬಹುಮಾನವಾಗಿ 44,444, ದ್ವೀತಿಯ ಸ್ಥಾನ ಪಡಿದ ತಂಡಕ್ಕೆ 22,222 ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ 11111 ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ ಎಂದು ಸಮಿತಿ ಮಾಹಿತಿ ನೀಡಿದೆ.

error: Content is protected !!