ಹೊದವಾಡದಲ್ಲಿ‌ ಎಸ್.ಎಸ್.ಎಫ್ ನಿಂದ ಅನುಸ್ಮರಣೆ ಕಾರ್ಯಕ್ರಮ

07/01/2021

ಮಡಿಕೇರಿ ಜ. 7 : ಎಸ್.ಎಸ್.ಎಫ್ ಸಕ್ರೀಯ ಕಾರ್ಯಕರ್ತ ಹಲವು ಆಶಿಕ್ ಗಳ ಮನಗೆದ್ದ ಮಾದಿಹುರ್ರಸೂಲ್ ಮರ್ಹೂಂ ಸಜ್ಜಾದ್ ಮುಸ್ಲಿಯಾರ್’ರವರ ಅನುಸ್ಮರಣೆ ಕೊಡಗು ಇಲಲ್ ಹಬೀಬ್ ಬುರ್ದಾ ಇಖ್ವಾನ್ ಹಾಗೂ ಎಸ್.ಎಸ್.ಎಫ್ ಆಝಾದ್ ನಗರ ಯುನಿಟ್ ವತಿಯಿಂದ ಬೃಹತ್ ಬುರ್ದಾ ಮಜ್ಲಿಸ್ ಹೊದವಾಡದಲ್ಲಿ‌ ನಡೆಯಿತು.

ಎಸ್.ಎಸ್.ಎಫ್ ಶಾಖಾ ನಾಯಕರಾದ ಮುಹಮ್ಮದ್ ಸಖಾಫಿ ನೇತೃತ್ವದಲ್ಲಿ ಝಿಯಾರತ್’ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ‌ ನೀಡಲಾಯಿತು. ಸ್ವಾಗತ ಸಮಿತಿ ಛೇರ್ಮಾನ್ ಅಶ್ರಫ್ ಅಹ್ಸನಿರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವು ಅಝಾದ್ ನಗರ ಮುಖ್ಯೋಪಾಧ್ಯಾಯರಾದ ಹಸೈನಾರ್ ಸಅದಿ ಪ್ರಾರ್ಥನೆ ನಡೆಸಿದರು.

ನಂತರ ನಡೆದ ಬುರ್ದಾ ಮಜ್ಲಿಸ್ ಕಮರುದ್ದೀನ್ ಅನ್ವಾರಿ ಅಸ್ಸಖಾಫಿ ಕೊಡಗರಹಳ್ಳಿ ನೇತೃತ್ವ ನೀಡಿದರು. ಕೊಡಗಿನ ಪ್ರಸಿದ್ಧ ಮಾದಿಹ್’ಗಳಾದ ಫೈರೋಝ್ ಹಿಮಮಿ ಪಡಿಯಾನಿ, ನಿಯಾಸ್ ಅನ್ವಾರಿ ಕುಶಾಲನಗರ, ಲತೀಫ್ ಫೈಝಾನಿ ಹುಂಡಿ, ಜಾಬಿರ್ ಅಮಾನಿ ಕಣ್ಣೂರು, ಇಸ್ಮಾಯಿಲ್ ಮುಸ್ಲಿಯಾರ್ ಮಟ್ಟಂ, ಸಿದ್ದೀಕ್ ಫಾಝಿಲಿ ಪಾಲಿಬೆಟ್ಟ, ಸ್ವಲಾಹ್ ಮುಸ್ಲಿಯಾರ್ ಕುಂಜಿಲ, ಇಬ್ರಾಹಿಂ ಬಾದುಶಾ ಸಿದ್ದಾಪುರ, ಶಮೀಂ ಆಝಾದ್, ರಾಫಿ ಹುಂಡಿ ಶಹೀರ್ ಆಝಾದ್, ನೌಫಲ್, ಸುಹೈಲ್ ಬೇತ್ರಿ, ಶಾಫಿ ಕುಂಜಿಲ, ಮನ್ಸೂರ್ ಕೊಳಕೇರಿ, ಅಝ್ಹರ್ ಮುಸ್ಲಿಯಾರ್ ನಾಪೋಕ್ಲು, ಶಫೀಕ್ ಕುಂಜಿಲ ಹಾಗೂ ಶಾಹಿಲ್ ಗೋಣಿಕೊಪ್ಪ ಮದ್ಹ್ ಹಾಡಿದರು.
ಕೇರಳದ ಪ್ರಸಿದ್ಧ ಗಾಯಕರಾದ ನಿಝಾರ್ ಖುತುಬಿ ಮಡವೂರ್ ನಶೀದಾಕ್ಕೆ ನೇತೃತ್ವ ನೀಡಿದರು.

ನಂತರ ಪ್ರತಿಷ್ಠಿತ ಮಅ’ದಿನ್ ಅಕಾಡೆಮಿ ಪ್ರಧಾನ ಮುದರ್ರಿಸ್ ಶೈಖುನಾ ಇಬ್ರಾಹಿಂ ಬಾಖವಿ ಮೇಲ್ಮುರಿ ಉಸ್ತಾದ್ ಸಂಸ್ಮರಣಾ ಭಾಷಣ ಹಾಗೂ ಸಮಾರೋಪ ದುಆ ನೆರವೇರಿಸಿದರು. ಸಜ್ಜಾದ್ ಮುಸ್ಲಿಯಾರ್’ರವರ ಜೀವನ ಶೈಲಿಯೂ ಅವರ ಸಂಘಟನಾ ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿದರು.ಆಝಾದ್ ನಗರ ಜಮಾಅತ್ ಅಧ್ಯಕ್ಷರಾದ ಉಸ್ಮಾನ್ ಹಾಜಿ ಕಾರ್ಯದರ್ಶಿ ರಫೀಕ್, ಎಸ್.ವೈ.ಎಸ್ ಅಧ್ಯಕ್ಷರಾದ ಹಂಝ ಮುಸ್ಲಿಯಾರ್ಕಾರ್ಯದರ್ಶಿ ಅಶ್ರಫ್ ಝೈನಿ ಎಸ್.ಎಸ್.ಎಫ್ ಮಡಿಕೇರಿ ಡಿವಿಷನ್ ಸದಸ್ಯರಾದ ಶಿಹಾಬ್ ಆಝಾದ್ ನಗರ್ ಸೆಕ್ಟರ್
ಪ್ರ.ಕಾರ್ಯದರ್ಶಿ ಬಶೀರ್ ಆಝಾದ್ ನಗರ್, ಮುರ್ಶಿದ್ ಅದನಿ, ಯುನಿಟ್ ಅಧ್ಯಕ್ಷರಾದ ಶಬೀರ್ ಸಖಾಫಿ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಕನ್ವೀನರ್ ಸಿನಾನ್ ಆಝಾದ್ ನಗರ್ ಸ್ವಾಗತಿಸಿ ಕೋರ್ಡಿನೇಟರ್ ಅಬ್ದುಲ್ಲಾ ಕೊಳಕೇರಿ ವಂದಿಸಿದರು.