ಹಾಗಲಕಾಯಿ ಸುಕ್ಕಾ ಮಾಡುವ ವಿಧಾನ

January 7, 2021

ಬೇಕಾಗುವ ಸಾಮಾಗ್ರಿಗಳು : ಹಾಗಲಕಾಯಿ 4(ಸಾಧಾರಣ ಗಾತ್ರದ್ದು), ಈರುಳ್ಳಿ 2, ಟೊಮೆಟೊ 2, ಆಲೂಗಡ್ಡೆ 1, ಹಸಿ ಮೆಣಸಿನಕಾಯಿ 3, ಅರಿಶಿಣ ಪುಡಿ 1/4 ಚಮಚ, ಖಾರದ ಪುಡಿ 1/4 ಚಮಚ, ಜೀರಿಗೆ ಪುಡಿ 1/4 ಚಮಚ, ತೆಂಗಿನ ತುರಿ 4-5 ಚಮಚ, ರುಚಿಗೆ ತಕ್ಕ ಉಪ್ಪು, ನಿಂಬೆ ರಸ 2 ಚಮಚ, ಕರಿ ಬೇವಿನ ಎಲೆ, ಎಣ್ಣೆ 2 ಚಮಚ

ತಯಾರಿಸುವ ವಿಧಾನ: ಉಪ್ಪು, ಖಾರದ ಪುಡಿ, ಅರಿಶಿಣ ಪುಡಿ, ನಿಂಬೆ ರಸವನ್ನು ಕತ್ತರಿಸಿದ ಹಾಗಲಕಾಯಿ ಜೊತೆ ಹಾಕಿ ಮಿಕ್ಸ್ ಮಾಡಿ ಒಂದು ಗಂಟೆ ಕಾಲ ಇಡಿ. ನಂತರ ತಳ ಸ್ವಲ್ಪ ಅಗಲವಿರುವ ಪಾತ್ರೆಗೆ ಫ್ರೈ ಮಾಡಲು ಸಾಕಾಗುವಷ್ಟು ಎಣ್ಣೆ ಹಾಕಿ ಅದರಲ್ಲಿ ಹಾಗಲಕಾಯಿ ಹಾಕಿ ಅದು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಒಂದು ಪಾತ್ರೆಯಲ್ಲಿ ತೆಗೆದಿಡಿ.

ಈಗ ಅದೇ ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಜೀರಿಗೆ ಹಾಕಿ ಹಸಿ ಮೆಣಸಿನಕಾಯಿ, ಕರಿ ಬೇವಿನ ಎಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಟೊಮೆಟೊ ಹಾಕಿ 2-3 ನಿಮಿಷ ಫ್ರೈ ಮಾಡಿ, ಈಗ ಫ್ರೈ ಮಾಡಿಟ್ಟ ಹಾಗಲಕಾಯಿ ಹಾಕಿ, ಗರಂ ಮಸಾಲ, ತುರಿದ ತೆಂಗಿನಕಾಯಿ, ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ ಮತ್ತೆ 5 ನಿಮಿಷ ಫ್ರೈ ಮಾಡಿದರೆ ಹಾಗಲಕಾಯಿ ಗೊಜ್ಜು ರೆಡಿ.

error: Content is protected !!