ವಿರಾಜಪೇಟೆಯಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ಕರವೇ ಕಾರ್ಯಕರ್ತರಿಂದ ರಸ್ತೆ ತಡೆ : ಪ್ರತಿಭಟನೆ

07/01/2021

ವಿರಾಜಪೇಟೆ ಜ.7: ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಗುಂಡಿಗಳಿಂದ ಅವೃತ್ತವಾಗಿದೆ ರಸ್ತೆ ಸಂಚಾರ ದುಸ್ತರವಾಗಿದೆ ರಸ್ತೆ ದುರಸ್ತಿಗಾಗಿ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ( ಶಿವರಾಮೆ ಗೌಡ ಬಣ) ರಸ್ತೆ ಮಾಡಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ( ಶಿವರಾಮೆಗೌಡ ಬಣ) ವಿರಾಜಪೇಟೆ ತಾಲ್ಲೂಕು ವೇದಿಕೆಯ ಅಂಗ ಸಂಸ್ಥೆಯಾದ ಆಟೋ ಚಾಲಕರ ಸಂಘ ಸಂಯುಕ್ತ ಆಶ್ರಯದಲ್ಲಿ ತೆಲುಗರ ಬೀದಿ ( ನೆಲ್ಲಮಕ್ಕಡ ಮೋಹನ್‌ ಮನೆಯ ಮುಂದಿನ) ತಿರುವಿನಲ್ಲಿ ರಸ್ತೆ ದುರಸ್ತಿ ಆಗ್ರಹಿಸಿ ರಸ್ತೆ ತಡೆ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಮಾತನಾಡಿದ ಕ.ರ.ವೇ ತಾಲ್ಲೂಕು ಅಧ್ಯಕ್ಷ ಟಿ.ವಿ.ಅನೀಲ್‌ ಕುಮಾರ್‌ , ಸಿದ್ದಾಪುರದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯು ಬೃಹತ್‌ ಗುಂಡಿಗಳಿಂದ ಅವೃತ್ತವಾಗಿದ್ದು, ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡಲು ಕಷ್ಟಸಾದ್ಯವಾಗಿದೆ. ವಾಹನಗಳು ಗುಂಡಿಗಳ ಮಧ್ಯೆದಲ್ಲಿ ಹಾದು ಸಂಚರಿಸಬೇಕು ವಾಹನಗಳ ಅಪಘಾತಗಳು ಸಂಭವಿಸಿದೆ ರಸ್ತೆಯನ್ನು ದುರಸ್ತಿಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಹಲವು ಭಾರಿ ಮನವಿ ಮಾಡಿದರು ಆಧಿಕಾರಿಗಳು ಮೌನ ವಹಿಸಿದ್ದಾರೆ ಸ್ಥಳೀಯ ಆಡಳಿತವು ರಸ್ತೆಯ ದುರಸ್ತಿಗೆ ಮುಂದಾಗಲಿಲ್ಲ. ಸರ್ಕಾರಕ್ಕೆ ವಾಹನ ತೆರಿಗೆ ಹಣವು ಕೊಡಗಿನಿಂದ ‍‍ಬೃಹತ್‌ ಪ್ರಮಾಣದಲ್ಲಿ ಸಲ್ಲಿಸಲಾದರು ರಸ್ತೆ ದುರಸ್ತಿ ಕಾಣದೆ ಇಂದು ವಾಹನ ಸವಾರರು ಸಂಚರಿಸಲು ಪರಿತಪಿಸುತಿದ್ದಾರೆ. ಡೆಂಟಲ್‌ ಕಾಲೇಜು , ನರ್ಸಿಂಗ್‌ ಕಾಲೇಜು, ಮತ್ತು ಖಾಸಗಿ ಶಾಲೆಗಳು ಕಾರ್ಯ ನಿರ್ವಹಿಸುತಿದ್ದು ವಿಧ್ಯಾಥ‍್ಗಳಿಗೆ ಕಂಟಕವೇನಿಸಿದೆ ರಸ್ತೆ. ಅದುರಿಂದ ಸ್ಥಳೀಯ ಮತ್ತು ಜಿಲ್ಲಾಡಳಿತದ ಕಣ್ಣು ತೆರೆಸಲು ಇಂದು ರಸ್ತೆ ತಡೆ ಮತ್ತು ಪ್ರತಿಭಟನೆಗೆ ಮುಂದಾಗಿದ್ದೇವೆ ಸ್ಥಳಕ್ಕೆ ಇಲಾಖೆಯ ಅಧಿಕಾರಿಗಳು ಆಗಮಿಸಬೇಕು ಅಲ್ಲದೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಪೊಲೀಸು ಇಲಾಖೆ ಆಧಿಕಾರಿಗಳ ಮನವಿಯ ಮೇರೆಗೆ ಸ್ಥಳಕ್ಕೆ ಅಗಮಿಸಿದ ಲೋಕೋಪಯೋಗಿ ಇಲಾಖೆ ಹಿರಿಯ ಸಹಾಯಕ ಇಂಜಿನೇಯರ್‌ ಸುಬ್ಬಯ್ಯ ಅವರು ಪ್ರತಿಭಟನೆ ನಿರತರೊಂದಿಗೆ ಮಾತನಾಡಿ ಪ್ರಮುಖ ರಸ್ತೆ ಸುಂಕದ ಕಟ್ಟೆಯಿಂದ ತೆಲುಗರ ಬೀದಿ ಅಂತ್ಯದ ವರೆಗೆ ಕಾಂಕ್ರಿಟ್‌ ರಸ್ತೆ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೊದನೆ ಬಂದಿದೆ ರಸ್ತೆ ಆಗಲೀಕರಣದ ಕಾರಣ ಸಾರ್ವಜನಿಕರು ಪರಿಹಾರ ಒದಗಿಸುವಂತೆ ರಾಜ್ಯ ಉಚ್ಚನ್ಯಾಯಲದಲ್ಲಿ ದಾವೆ ಹೊಡಲಾಗಿರುತ್ತದೆ ರಸ್ತೆ ಮರು ನಿರ್ಮಾಣಕ್ಕೆ ಕಷ್ಟಸಾದ್ಯವಾಗಿದೆ . ಕಾನೂನು ಉಲ್ಲಂಘನೆ ಮಾಡುವುದು ಅಪರಾದವಗಿರುವುದರಿಂದ ರಸ್ತೆ ದುರಸ್ತಿ ಕಾರ್ಯಕ್ಕೆ ಕಾಲವಕಾಶ ಬೇಕು. ಈಗಿನ ಪರಿಸ್ಥಿತಿಗೆ ಅನುಗುಣವಾಗಿ ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ತತ್ಕಾಲಿಕವಾಗಿ ಮುಚ್ಚಲು ಕ್ರಮ ಜರುಗಿಸಲಾಗುವುದು ಕರಾವೇ ಸಂಘಟನೆಯ ಮನವಿ ಸ್ವೀಕರಿಸಿ ಹೇಳಿದರು.

ಪ್ರತಿಭಟನೆಯ ವೇಳೆ ರಸ್ತೆಯಲ್ಲಿ ಬಾಳೆ ಗಿಡವನ್ನು ನೆಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಕಾರ್ಯಕರ್ತರು ಒಂದು ವಾರದ ಗಡುವಿನೊಂದಿಗೆ ಪ್ರತಿಭಟನೆ ಹಿಂಪಡೆದರು.

ವೇದಿಕೆಯ ಉಪಧ್ಯಕ್ಷ ಟಿ.ವಿ. ಸಂತೋಷ್‌, ಕಾರ್ಯಧರ್ಶಿ ತಬ್ರೀಜ್‌, ಹೋಬಳಿ ಆದ್ಯಕ್ಷ ಜುನೈದ್‌, ಸಂಘಟನೆಯ ಸದಸ್ಯರು ಹಾಗೂ ಅಟೋ ಚಾಲಕ ಸಂಘಟನೆಯ ಎ. ಸತೀಶ್‌, ಪೊನ್ನಪ್ಪ, ತುಕಾರಂ, ನಾಗೇಶ್‌ ಮೊದಲಾದವರು ಹಾಜರಿದ್ದರು.