ಹೆದ್ದಾರಿ ಕಾಮಗಾರಿ : ಖುದ್ದು ಗುಣಮಟ್ಟ ಪರಿಶೀಲಿಸಿದ ಸಂಸದ ಪ್ರತಾಪ್ ಸಿಂಹ

January 7, 2021

ಮಡಿಕೇರಿ ಜ.7 : ಮೈಸೂರು- ಮಡಿಕೇರಿ ಹೆದ್ದಾರಿ ಡಾಂಬರೀಕರಣ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದು, ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರು.
ಹುಣುಸೂರು ಭಾಗಕ್ಕೆ ಭೇಟಿ ನೀಡಿದ ಅವರು ಹಾಕಿರುವ ಡಾಂಬರನ್ನು ಖುದ್ದು ಪರಿಶೀಲಿಸಿದರು. ಇಂಜಿನಿಯರ್ ಗಳು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿದ ಅವರು ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು.

error: Content is protected !!