ಮಡಿಕೇರಿಯಲ್ಲಿ ಜ.10 ರಂದು ‘ಸಾಹೇಬ್ರು ಬಂದವೇ!!’ಅರೆಭಾಷೆ ನಾಟಕ ಪ್ರದರ್ಶನ

07/01/2021

ಮಡಿಕೇರಿ ಜ. 7: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ‘ಸಾಹೇಬ್ರು ಬಂದವೇ!!’ ಅರೆಭಾಷೆ ನಾಟಕ ಪ್ರದರ್ಶನವು ಜನವರಿ, 10 ರಂದು ಸಂಜೆ 6 ಗಂಟೆಗೆ ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆ ಆವರಣದಲ್ಲಿ ನಡೆಯಲಿದೆ.
ಶಾಸಕರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಉದ್ಘಾಟಿಸಲಿದ್ದಾರೆ. ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಎಂ.ಪಿ.ಸುನೀಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಹೊಸೂರು ರಮೇಶ ಜೋಯಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಕೋರನ ವಿಶ್ವನಾಥ್, ಸಂತ ಜೋಸೆಫರ ವಿದ್ಯಾಸಂಸ್ಥೆಯ ಶಾಲಾ ಸಂಚಾಲಕರಾದ ಸಿಸ್ಟರ್ ಅಂಥೋನಿಯಮ್ಮ, ಆಕಾಶವಾಣಿ ಉದ್ಘೋಷಕರಾದ ಸುಬ್ರಾಯ ಸಂಪಾಜೆ, ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಹಾಗೂ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಸಾಹೇಬ್ರು ಬಂದವೇ ನಾಟಕದ ಮೂಲವು ನಿಖೋಲಾಯ್ ಗೊಗಲ್‍ನ ದಿ ಇನ್ಸ್‍ಪೆಕ್ಟರ್ ಜನರಲ್’ ಆಗಿದೆ. ಕನ್ನಡಕ್ಕೆ ಕೆ.ವಿ.ಸುಬ್ಬಣ್ಣ ಹಾಗೂ ಕೆ.ವಿ.ಅಕ್ಷರ ಅವರು ತಂದಿದ್ದಾರೆ. ಅರೆಭಾಷೆಗೆ ಜಯಪ್ರಕಾಶ್ ಕುಕ್ಕೇಟಿ ರಚಿಸಿದ್ದಾರೆ. ಜೀವನ್‍ರಾಂ ಸುಳ್ಯ ಅವರು ನಿರ್ದೇಶಿಸಿದ್ದಾರೆ.
ನಾಟಕ ಪಾತ್ರದಲ್ಲಿ ವಿನೋದ್ ಮೂಡಗದ್ದೆ(ಮೇಯರ್), ಎ.ಟಿ.ಕುಸುಮಾಧರ(ಮ್ಯಾಜಿಸ್ಟ್ರೇಟ್), ಅಶ್ವಿನ್ ಕೆ.ಎಸ್(ಎಂಜಿನಿಯರ್), ಅಮೃತ್ ಕುಕ್ಕೇಟಿ(ಡಾಕ್ಟ್ರ್ / ವ್ಯಾಪಾರಿ), ಶ್ರುತಿ ಮೆದು(ಎಜ್ಯುಕೇಶನ್ ಆಫೀಸರ್), ಸುಜಿತ್ ಕಾಯರಕಟ್ಟೆಮನೆ (ತಿವಾರಿ), ಹಾರಂಬಿ ಯತೀನ್ ವೆಂಕಪ್ಪ(ಸಕ್ಸೇನಾ), ಮಮತಾ ಕಲ್ಮಕಾರು(ಕಾವೇರಿ), ಸುಶ್ಮಿತಾ ಪೊಯ್ಯಮಜಲು(ಮೋನಿಕಾ), ಬಂಗಾರಕೋಡಿ ಶಿವಗಣೇಶ್(ಕಡ್ಡಿಯಪ್ಪ), ನಿತ್ಯಾನಂದ (ಗುಡ್ಡಪ್ಪ), ಭುವನ್ ಕುಂಬಳಚೇರಿ (ಡಿವೈಎಸ್‍ಪಿ/ ವ್ಯಾಪಾರಿ), ದೀಪಕ್ ಮಜಿಕೋಡಿ(ದೋಚಣ್ಣ), ರಾಜ್‍ಮುಖೇಶ್ ಸುಳ್ಯ(ಬಾಚಣ್ಣ), ವಿಲಾಸ್ ರಾವ್ ತಾನಾಜಿ (ಪೋಸ್ಟ್ ಮಾಸ್ಟರ್), ಬಂಗಾರಕೋಡಿ ಚೇತಸ್(ಮಾಣಿ), ಮತ್ತು ಬಂಗಾರಕೋಡಿ ಯೋಗಿತ(ವ್ಯಾಪಾರಿ).
ನಾಟಕದಲ್ಲಿ ಗುರುಮೂರ್ತಿ ವರದಮೂಲ(ವಸ್ತ್ರ ವಿನ್ಯಾಸ), ಪ್ರಕಾಶ್ ಪಿ.ಶೆಟ್ಟಿ ರಂಗಮಂಟಪ ಬೆಂಗಳೂರು (ರಂಗ ವಿನ್ಯಾಸ), ಶಿಶಿರ ಕಲ್ಕೂರ(ಬೆಳಕು ನಿರ್ವಹಣೆ) ಉಡುಪಿ ಗೀತಂ ಗಿರೀಶ್(ಸಂಗೀತ ಸಹಕಾರ)