ವಿವಿಧ ಉದ್ದೇಶಗಳಿಗೆ 274 ಎಕರೆ ಜಾಗ ಗುರುತು : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್

January 7, 2021

ಮಡಿಕೇರಿ ಜ. 7 : ಜಿಲ್ಲೆಯಲ್ಲಿ ವಸತಿ ಯೋಜನೆ, ಅಂಗನವಾಡಿ, ವಿದ್ಯಾರ್ಥಿ ನಿಲಯ, ಸಮುದಾಯ ಭವನಗಳು, ಕಸ ವಿಲೇವಾರಿ, ಸ್ಮಶಾನ ಹೀಗೆ ವಿವಿಧ ಉದ್ದೇಶಗಳಿಗೆ ಸುಮಾರು 274 ಎಕರೆ ಜಾಗವನ್ನು ಕಾಯ್ದಿರಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯಾಧಿಕಾರಿಗಳ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕಳೆದ 2019 ರಿಂದ ಇಲ್ಲಿಯವರೆಗೆ ಸ್ಮಶಾನಕ್ಕಾಗಿ 40 ಕಡೆಗಳಲ್ಲಿ 30 ಎಕರೆ ಜಾಗ ನೀಡಲಾಗಿದೆ. ವಿದ್ಯಾರ್ಥಿ ನಿಲಯಕ್ಕೆ ಮೂರು ಕಡೆಗಳಲ್ಲಿ 9 ಎಕರೆ, ಗೋಮಾಳಕ್ಕೆ 38.50 ಎಕರೆ, ವಸತಿ ಯೋಜನೆಯಡಿ 10 ಕಡೆಗಳಲ್ಲಿ 17.55 ಎಕರೆ, ಕಸವಿಲೇವಾರಿಗೆ 31 ಕಡೆಗಳಲ್ಲಿ 29.13 ಎಕರೆ, 6 ಗ್ರಾಮಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 1.81 ಎಕರೆ, 6 ಕಡೆಗಳಲ್ಲಿ ಅಂಗನವಾಡಿಗೆ 0.38 ಎಕರೆ, ಪ್ರಕೃತಿ ವಿಕೋಪ ಸಂತ್ರಸ್ತರಿಗೆ 7 ಗ್ರಾಮಗಳಲ್ಲಿ 41.50 ಎಕರೆ, ಹಾಗೆಯೇ ವಿವಿಧ ಉದ್ದೇಶಗಳಿಗೆ 33 ಕಡೆಗಳಲ್ಲಿ 59.22 ಎಕರೆ ಜಾಗ ಕಾಯ್ದಿರಿಸಿ ನೀಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 138 ಕಡೆಗಳಲ್ಲಿ 274.43 ಎಕರೆ ಭೂಮಿ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸ್ಮಶಾನ ಉದ್ದೇಶಕ್ಕಾಗಿ ಹಾಕತ್ತೂರು (0.50 ಎಕರೆ), ಕಗ್ಗೋಡ್ಲು (0.45), ಬಿಳಿಗೇರಿ (0.32), ಕರಿಕೆ (2), ನಗರೂರು(0.50), ಮುಳ್ಳುಸೋಗೆ(0.30), ನಾಕೂರು ಶಿರಂಗಾಲ(0.30), ಗಣಗೂರು(0.90), ಬೆಂಬಳೂರು(1.50), ಕಿರಿಬಿಳಹ(1.04), ಹಾನಗಲು(1.10), ಬಸವನಹಳ್ಳಿ(0.50), ಬೆಳಾರಳ್ಳಿ(0.50), 7ನೇ ಹೊಸಕೋಟೆಯಲ್ಲಿ ಪರಿಶಿಷ್ಟರು, ಮುಸ್ಲಿಂ ಹಾಗೂ ಇತರರಿಗೆ ತಲಾ 1 ಎಕರೆ, ತಳಗೂರು(0.50), ವಾಲ್ನೂರು ತ್ಯಾಗತ್ತೂರು(0.50), ಶಿರಂಗಾಲ(0.50), ಹೊಸಹಳ್ಳಿ(0.60), ಬಾಡಗ ಬಾನಂಗಾಲ(0.90), (0.12), ಕಡಗದಾಳು(0.80), ಬೆಸೂರು(0.75), ಮೂದ್ರವಳ್ಳಿ(1), ಮಾವಿನಹಳ್ಳಿ(0.50) ಮೆಣಸ(1), ಗೆಜ್ಜೆಹಣಕೋಡು(0.50), ದೊಡ್ಡಕೊಡ್ಲಿ(2), ಹೆಗ್ಗಳ(0.50), ಬಲ್ಲಮಾವಟಿ(0.25), ಸಣ್ಣಪುಲಿಕೋಟು(1), ಪೆರೂರು(0.40), ಹೆಬ್ಬಾಲೆ(0.60), ಬೇಟೋಳಿ(2), ಕದನೂರು(0.62), ಕೆ.ಪೆರಾಜೆ(0.20), (0.50), ಸಂಪಾಜೆ(0.20) ಒಟ್ಟು 30.35 ಎಕರೆ ಜಾಗ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದ್ದಾರೆ.
ವಿದ್ಯಾರ್ಥಿ ನಿಲಯಕ್ಕೆ: ತೋಳೂರು ಶೆಟ್ಟಳ್ಳಿಯಲ್ಲಿ ಅಂಬೇಡ್ಕರ್ ವಸತಿ ಶಾಲೆ(8.58 ಎಕರೆ), ಕರ್ಣಂಗೇರಿಯಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ಮತ್ತು ಬಾಲಕರ ವಿದ್ಯಾರ್ಥಿ ನಿಲಯಕ್ಕೆ ತಲಾ 0.20 ಎಕರೆ, ಒಟ್ಟು 8.98 ಎಕರೆ ಜಾಗ ಗುರುತಿಸಿ ಇಲಾಖೆಗೆ ಒದಗಿಸಲಾಗಿದೆ. ಹಾಗೆಯೇ ವಿರಾಜಪೇಟೆ ತಾಲ್ಲೂಕಿನ ಹೆಗ್ಗಳ ಗ್ರಾಮದಲ್ಲಿ ಗೋಮಾಳ ಉದ್ದೇಶಕ್ಕೆ 38.50 ಎಕರೆ ಜಾಗ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದ್ದಾರೆ.
ಹಾಗೆಯೇ ವಸತಿ ಯೋಜನೆಗಾಗಿ ಮಡಿಕೇರಿ ತಾಲ್ಲೂಕಿನ ಹಾಕತ್ತೂರು ಗ್ರಾಮದಲ್ಲಿ (2.20 ಎಕರೆ), ಪೆರೂರು(1), ಮರಗೋಡು(1), ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು(2.85), ನಿಟ್ಟೂರು(0.80), ಸೋಮವಾರಪೇಟೆ ತಾಲ್ಲೂಕಿನಲ್ಲಿ ಮನೆ ನಿವೇಶನಕ್ಕೆ 7ನೇ ಹೊಸಕೋಟೆಯಲ್ಲಿ (3.50) ಮತ್ತು (3), ಹೆಬ್ಬಾಲೆ(3), ಗೆಜ್ಜೆಹಣಕೋಡು(1.40), ಮೆಣಸ(2) ಒಟ್ಟು 17.55 ಎಕರೆ ಕಾಯ್ದಿರಿಸಿ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಕಸವಿಲೇವಾರಿಗೆ: ಕಸವಿಲೇವಾರಿಗಾಗಿ ಮಡಿಕೇರಿ ತಾ. ಕೋರಂಗಾಲ(1 ಎಕರೆ), ಎಂ.ಚೆಂಬು(2), ಕಾಂತೂರು(0.25), ದೊಡ್ಡಪುಲಿಕೋಟು(0.65), ಮರಗೋಡು(0.50), ಕಗ್ಗೋಡ್ಲು(0.40), ಸಣ್ಣಪುಲಿಕೋಟು(1), ಕಡಗದಾಳು (0.06.50), ಕೆ.ಪೆರಾಜೆ (0.50), ಮಕ್ಕಂದೂರು(0.11 ಕಸ ವಿಲೇವಾರಿ ಘಟಕ ಸ್ಥಾಪನೆ), 2ನೇ ಮೊಣ್ಣಂಗೇರಿ (10 ಎಕರೆ ಭೂಮಿಯನ್ನು ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ), ಹಾಗೆಯೇ ವಿರಾಜಪೇಟೆ ತಾಲ್ಲೂಕಿನ ಶ್ರೀಮಂಗಲ(0.07.50), ಹೆಗ್ಗಳ(0.50), ಬಾಳುಗೋಡು(0.50), ಹಾನಗಲ್ಲು ಶೆಟ್ಟಳ್ಳಿ(0.50), ಗುಡುಗಳಲೆ(0.75), ಯಲಕನೂರು(0.60), ಬಸವನಹಳ್ಳಿ(0.50), 7ನೇ ಹೊಸಕೋಟೆ(0.20), ತೊರೆನೂರು(1), ಕಾಲಸಗೋಡು(0.90), ಬೆಸೂರು(0.50), ಹೊಸಳ್ಳಿ(0.50), ಹಾರೋಹಳ್ಳಿ(0.70), ಗೆಜ್ಜೆಹಣಕೋಡು(0.80), ಬೆಟ್ಟದಳ್ಳಿ (1.78), ಬಡುಬನಹಳ್ಳಿ(0.50), ವೈಜ್ಞಾನಿಕ ಕಸ ವಿಲೇವಾರಿಗೆ ಚಿಕ್ಕತ್ತೂರು(1 ಎಕರೆ) ಅಜ್ಜಳ್ಳಿ (0.50, ಅಭ್ಯತ್‍ಮಂಗಲ (0.25) ಮತ್ತು ದೊಡ್ಡಕೊಡ್ಲಿ(0.60). ಒಟ್ಟು 29.13 ಎಕರೆ ಜಾಗ ಒದಗಿಸಲಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್ ಅವರು ವಿವರಿಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬಾಣವಾರ(0.40 ಎಕರೆ), ಚಿಕ್ಕಭಂಡಾರ (0.06), ಕರ್ಣಂಗೇರಿ(0.30), ಕೋರಂಗಾಲ(0.50), ಚೇರಂಗಾಲ(0.40), ಬಿಳುಗುಂದ (0.15) ಒಟ್ಟು 1.81 ಎಕರೆ ಜಾಗ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಅಂಗನವಾಡಿ ಕೇಂದ್ರಗಳಿಗೆ ನಂಜರಾಯಪಟ್ಟಣ (0.13), ಬೆಟೋಳಿ(0.05), ಕರ್ಣಂಗೇರಿ(0.05), ನಲ್ಲೂರು(0.02), ಹೆರವನಾಡು(0.03.75) ವಿ.ಬಾಡಗ(0.10) ಒಟ್ಟು 0.38.75 ಜಾಗ ಒದಗಿಸಲಾಗಿದೆ. ಹಾಗೆಯೇ ಜಿಲ್ಲೆಯ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಪುನರ್ವಸತಿ ವಸತಿ ನಿರ್ಮಾಣಕ್ಕೆ ಬಿಳಿಗೇರಿ(1.88), ಗಾಳಿಬೀಡು(9.50), ಕರ್ಣಂಗೇರಿ(4), ಮದೆ (13.08), ಕೆ.ನಿಡುಗಣೆ (4.60), ಅರ್ವತ್ತೊಕ್ಲು(0.22 ಶಾಶ್ವತ ಪುನರ್ ವಸತಿ ಕಲ್ಪಿಸಲು), ಅಭ್ಯತ್‍ಮಂಗಲ (8.22 ಎಕರೆಯಲ್ಲಿ ಕಾವೇರಿ ನದಿ ಪಾತ್ರದ ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಪುನರ್ ವಸತಿ ಕಲ್ಪಿಸಲು), ಒಟ್ಟು 41.50 ಎಕರೆ ಜಾಗ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಮುಂದುವರೆದು ಜಿಲ್ಲೆಯಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣದ ಉದ್ದೇಶಕ್ಕೆ ಕರ್ಣಂಗೇರಿ(0.45), ಚುನಾವಣಾ ವಿದ್ಯುನ್ಮಾನ ಮತಯಂತ್ರಗಳ ಶೇಖರಣ ಘಟಕ ಸ್ಥಾಪಿಸಲು ಕೆ.ಬಾಡಗ (2.14), ಪ್ರೀ ಮೆಟ್ರಿಕ್ ವಿದ್ಯಾರ್ಥಿ ನಿಲಯಕ್ಕೆ ಕೊಣಂಜಗೇರಿ(0.30), ಶ್ರೀ ತಲಕಾವೇರಿ ಕ್ಷೇತ್ರದಲ್ಲಿ ವಾಹನ ನಿಲುಗಡೆ ಉದ್ದೇಶಕ್ಕೆ ಚೇರಂಗಾಲ(5), ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಪದಕಲ್ಲು (2.50), ಪಾಲಿಕ್ಲಿನಿಕ್ ಪಶುಪಾಲನಾ ಇಲಾಖೆಗೆ ಕೆ.ಬಾಡಗ(0.60), ಪೊಲೀಸ್ ಅಧೀಕ್ಷಕರು, ನಕ್ಸಲ್ ನಿಗ್ರಹ ಪಡೆ ಕಾರ್ಕಳ ಸಿಂಗತ್ತೂರು (3.92), ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಗೆ ಕರ್ಣಂಗೇರಿ(1), ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಕ್ಕೆ ಕುಂಜಿಲ(0.10), ಕುಂಜಿಲ ಕಕ್ಕಬ್ಬೆ ಗ್ರಾ.ಪಂ.ಕಟ್ಟಡಕ್ಕೆ ಕುಂಜಿಲದಲ್ಲಿ (0.10), ಕಿರಿಯ ಸಿವಿಲ್ ನ್ಯಾಯಾಧೀಶರಿಗೆ ನೂತನ ವಸತಿ ಗೃಹದ ನಿರ್ಮಾಣಕ್ಕೆ ಗಾಳಿಬೀಡು(6.10), ಕೊಳಕೇರಿಯಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ (0.13), ಕಡಗಾಳು ಗ್ರಾ.ಪಂ.ಕಟ್ಟಡಕ್ಕೆ(0.07.50), ಕರ್ಣಂಗೇರಿ ಜಿಲ್ಲಾ ಬಾಲ ಭವನ ಸೊಸೈಟಿಗೆ (0.50), ಕಡಗದಾಳು ಪೊಲೀಸ್ ಇಲಾಖೆಯ ನಿಸ್ತಂತು ಮರು ಪ್ರಸರಣಾ ಕೇಂದ್ರಕ್ಕೆ(0.10), ಬಾಳೆಲೆ ನಾಡಕಚೇರಿ ಕಟ್ಟಡ ನಿರ್ಮಾಣಕ್ಕೆ (0.45), ಚೆನ್ನಯ್ಯನಕೋಟೆಯಲ್ಲಿ ಡಾ.ಬಾಬು ಜಗಜೀವನ್ ರಾಮ್ ಭವನ ನಿರ್ಮಾಣಕ್ಕೆ (0.20), ಹಳ್ಳಿಗಟ್ಟು ಸಾರ್ವಜನಿಕ ಉದ್ಯಾನವನಕ್ಕೆ (0.40), ಬಾಳೆಲೆ ರೈತ ಸಂಪರ್ಕ ಕೇಂದ್ರಕ್ಕೆ (0.15), ಚಿಕ್ಕತ್ತೂರಿನಲ್ಲಿ ತೋಟಗಾರಿಕೆ ಇಲಾಖೆಗೆ (7.30), ಉಲುಗುಲಿ ಗ್ರಾ.ಪಂ.ಕಟ್ಟಡ ನಿರ್ಮಾಣಕ್ಕೆ (1.59), ಬೆಟ್ಟದಳ್ಳಿ ಆರೋಗ್ಯ ಉಪ ಕೇಂದ್ರಕ್ಕೆ (0.10), ಜಂಬೂರಿನಲ್ಲಿ 66/11/ ಕೆ.ವಿ. ವಿದ್ಯುತ್ ಸಾಮಥ್ರ್ಯದ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು (2 ಎಕರೆ), ಬಸವನಹಳ್ಳಿಯಲ್ಲಿ ಕಿರಿಯ ಸಿವಿಲ್ ನ್ಯಾಯಾಧೀಶರಿಗೆ ನೂತನ ವಸತಿ ಗೃಹದ ನಿರ್ಮಾಣಕ್ಕೆ(1), ಚಿಕ್ಕಳುವಾರ ಸ.ಹಿ.ಪ್ರಾ.ಶಾಲೆಗೆ(1.25), ಕೂಡ್ಲೂರು ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ(0.70), ಕಾಲೇಜು ಶಿಕ್ಷಣ ಇಲಾಖೆ ಆಯುಕ್ತಾಲಯ ಕಚೇರಿಗೆ ಕುಕ್ಲೂರು(0.20), ಮುಳ್ಳುಸೋಗೆಯಲ್ಲಿ (7.10)ವಿದ್ಯುತ್ ಸಾಮಥ್ರ್ಯದ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು, ಶ್ರೀಮಂಗಲದಲ್ಲಿ(1) ಚೆಟ್ಟಳ್ಳಿ ಸರ್ಕಾರಿ ಮಾದರಿ ಪ್ರಾ.ಶಾಲೆಗೆ, ಕಿರಿಕೊಡ್ಲಿ ಸರ್ಕಾರಿ ಕಿರಿಯ ಪ್ರಾ.ಶಾಲೆಗೆ ಕೆರಗನಳ್ಳಿ(1.70), 7ನೇ ಹೊಸಕೋಟೆ(0.57)ಯಲ್ಲಿ ಚಿಕ್ಲಿಹೊಳೆ ಸರ್ಕಾರಿ ಕಿರಿಯ ಪ್ರಾ.ಶಾಲೆಗೆ ಮತ್ತು ಗುಡುಗಳಲೆಯಲ್ಲಿ ಜಯದೇವ ಜಾನುವಾರು ಜಾತ್ರೆ ಮಹೋತ್ಸವಕ್ಕೆ(9 ಎಕರೆ) ಮತ್ತು ಹೊಸಳ್ಳಿಯಲ್ಲಿ(1.50) 66/11 ಕೆ.ವಿ ವಿದ್ಯುತ್ ಸಾಮಥ್ರ್ಯದ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ಜಾಗ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

error: Content is protected !!