ಬೋಯಿಕೇರಿಯಲ್ಲಿ ಫೆ.5 ರಿಂದ ರಾಜ್ಯಮಟ್ಟದ ಕಾಲ್ಚೆಂಡು ಪಂದ್ಯಾಟ

January 7, 2021

ಮಡಿಕೇರಿ : ಬೋಯಿಕೇರಿ ಫುಟ್ಬಾಲ್ ಕ್ಲಬ್ (ಬಿ.ಎಫ್.ಸಿ) ವತಿಯಿಂದ ಜನವರಿ 5 ರಿಂದ 7 ರವರೆಗೆ ಪ್ರಥಮ ಬಾರಿಗೆ ರಾಜ್ಯಮಟ್ಟದ 5+2 ಜನರ ಕಾಲ್ಚೆಂಡು ಪಂದ್ಯಾಟ ಬೋಯಿಕೇರಿಯ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೂ.2000 ಮೈದಾನ ಶುಲ್ಕವನ್ನು ನಿಗದಿ ಮಾಡಲಾಗಿದ್ದು,ಮುಂಗಡವಾಗಿ 500 ರೂಗಳನ್ನು ಪಾವತಿಸಿ ನೋಂದಾಯಿಸಿಕೊಳ್ಳುವ ತಂಡಗಳಿಗೆ ಮಾತ್ರ ಪಂದ್ಯಾವಳಿ ಭಾಗವಹಿಸಲು ಅವಕಾಶವಿದ್ದು, ಆಸಕ್ತ ತಂಡಗಳು ಫೆ.1ರೊಳಗೆ ನೋಂದಾಯಿಸಲು ಆಯೋಜಕರು ಮನವಿ ಮಾಡಿದ್ದಾರೆ.
ಭಾಗವಹಿಸುವ ತಂಡಗಳು ಕಡ್ಡಾಯವಾಗಿ ಜರ್ಸಿಯನ್ನು ಧರಿಸಿರಬೇಕು. ಮೈದಾನದಲ್ಲಿ ಯಾವುದೇ ಗೊಂದಲ ಉಂಟಾದಾಗ ತಂಡದ ನಾಯಕರಿಗೆ ಮಾತ್ರ ಚರ್ಚಿಸಲು ಅವಕಾಶವಿದ್ದು, ಅಂತಿಮ ನಿರ್ಧಾರವನ್ನು ತೀರ್ಮಾನಿಸುವ ಅಧಿಕಾರ ಅಂಪೈರ್ ಹಾಗೂ ಆಯೋಜಕರಿಗೆ ಇರುತ್ತದೆ.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ.25,555 ನಗದು, ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 15,555, ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ವೈಯಕ್ತಿಕ ಬಹುಮಾನಗಳನ್ನು ಹಾಗೂ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಬೆಸ್ಟ್ ಪ್ಲೇಯರ್ ಆಫ್ ದೀ ಟೂರ್ನಮೆಂಟ್, ಬೆಸ್ಟ್ ಡಿಫೆಂಡರ್, ಹೈಯೆಸ್ಟ್ ಸ್ಕೋರರ್ ಪ್ರಸ್ತಿಗಳನ್ನು ನೀಡಲಾಗುತ್ತದೆ.
ಫೈನಲ್ ಪಂದ್ಯಕ್ಕೂ ಮುನ್ನ ಯುವತಿಯರ ಪ್ರದರ್ಶನ ಪಂದ್ಯಾಟ ನಡೆಯಲಿದ್ದು, ಕೋವಿಡ್-19 ಮಾರ್ಗಸೂಚಿಯಂತೆ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಪಂದ್ಯಾವಳಿಯು ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
ನಿತಿನ್ 9480511394, ಶಿವ 8762417367, ಚಂದ್ರ 9741483649, ಸುನೀಲ್ 9482979496 – ( ಗೂಗ್ಲ್ ಪೇ)
ಮೊಬೈಲ್ ಸಂಖ್ಯೆಯನ್ನ ಸಂಪರ್ಕಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!